ಮರೀನಾ ಬೀಚ್‌ನಲ್ಲಿ ‘ಕರುಣಾನಿಧಿ’ ಅಂತ್ಯಕ್ರಿಯೆ

7

ಮರೀನಾ ಬೀಚ್‌ನಲ್ಲಿ ‘ಕರುಣಾನಿಧಿ’ ಅಂತ್ಯಕ್ರಿಯೆ

Published:
Updated:

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಅಂತ್ಯಕ್ರಿಯೆ ಮರೀನಾ ಬೀಚ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. 

ಸಂಜೆ 4 ಗಂಟೆಗೆ ರಾಜಾಜಿಹೌಲ್‌ನಿಂದ ಆರಂಭವಾದ ಪಾರ್ಥಿವ ಶರೀರದ ಅಂತಿಮ ಯಾತ್ರೆ ಶಿವಾನಂದ ರಸ್ತೆ, ಅಣ್ಣಾ ರಸ್ತೆ, ವಲ್ಲಾಝಾ ರಸ್ತೆ, ಕಾಮರಾಜರ್‌ ರಸ್ತೆ ಮಾರ್ಗವಾಗಿ ಮರೀನಾ ಬೀಚ್‌ಗೆ ತಲುಪಿತು.

ಅಗಲಿದ ನಾಯಕನಿಗೆ ಸೇನಾಪಡೆ ಸಿಬ್ಬಂದಿ ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಿದರು.

ಕುಟುಂಬ ಸದಸ್ಯರು ಕರುಣಾನಿಧಿ ಅವರಿಗೆ ದ್ರಾವಿಡ ಸಂಪ್ರಾದಯದಂತೆ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಅಣ್ಣಾದೊರೈ ಸಮಾಧಿಯ ಬಳಿ ಅಂತ್ಯಕ್ರಿಯೆ ನಡೆಸಲಾಯಿತು. 

ಇದೇ ವೇಳೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಮಿಳುನಾಡು ರಾಜ್ಯಪಾಲ ಭನ್ವರಿಲಾಲ್‌ ಪುರೋಹಿತ್‌, ಸಂಸದ ವೀರಪ್ಪ ಮೊಯ್ಲಿ, ಗುಲಾಬ್‌ನಬಿ ಆಜಾದ್‌, ಪಿ.ಜಿ.ಆರ್‌.ಸಿಂಧ್ಯಾ ಅವರು ಕರುಣಾನಿಧಿಗೆ ಅಂತಿಮ ನಮನ ಸಲ್ಲಿಸಿದರು. 

ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. *

*

*

*

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !