ದರ್ಶನಕ್ಕೆ ನೂಕಾಟ: ಇಬ್ಬರ ಸಾವು

7

ದರ್ಶನಕ್ಕೆ ನೂಕಾಟ: ಇಬ್ಬರ ಸಾವು

Published:
Updated:

ಚೆನ್ನೈ (ಪಿಟಿಐ/ರಾಯಿಟರ್ಸ್‌): ಕರುಣಾನಿಧಿ ಅವರ ಮೃತದೇಹವನ್ನು ಇರಿಸಿದ್ದ ರಾಜಾಜಿ ಸಭಾಂಗಣದ ಮುಂಭಾಗದಲ್ಲಿ ಜನಸಾಗರವೇ ಸೇರಿತ್ತು. ಅಗಲಿದ ನಾಯಕನ ದರ್ಶನಕ್ಕಾಗಿ ಜನ ಹಾತೊರೆದರು. ನೂಕು ನುಗ್ಗಲು ಉಂಟಾಗಿ ಇಬ್ಬರು ಮೃತಪಟ್ಟರೆ 47 ಮಂದಿ ಗಾಯಗೊಂಡಿದ್ದಾರೆ. 

ಹಲವು ಮಹಿಳೆಯರಿಗೆ ತರಚು ಗಾಯಗಳಾಗಿದೆ. ಕೆಲವರು ಪ್ರಜ್ಞೆ ತಪ್ಪಿ ಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಭಾಂಗಣದ ಮುಂಭಾಗ ಆತಂಕದ ಕ್ಷಣಗಳು ಉಂಟಾದವು. ಜನರನ್ನು ನಿಯಂತ್ರಿಸಲು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಶ್ರದ್ಧಾಂಜಲಿ ಅರ್ಪಿಸಲು ಬಂದ ಜನರು ಕಿತ್ತೆಸೆದರು. ಅಂತಿಮ ದರ್ಶನಕ್ಕೆ ವ್ಯವಸ್ಥಿತವಾಗಿ ಜನರನ್ನು ಒಳಬಿಡುವ ಪೊಲೀಸರ ಪ್ರಯತ್ನವೂ ಯಶಸ್ವಿಯಾಗಲಿಲ್ಲ. ಜನರು ಎಲ್ಲ ಕಡೆಗಳಿಂದಲೂ ಸಭಾಂಗಣದತ್ತ ನುಗ್ಗತೊಡಗಿದರು. 

ಪ್ರಮುಖ ವ್ಯಕ್ತಿಗಳು ದರ್ಶನ ಪಡೆಯುವುದಕ್ಕೆ ವ್ಯವಸ್ಥೆ ಮಾಡಿದ್ದ ಸಭಾಂಗಣದ ಹಿಂಭಾಗ ಮತ್ತು ಬದಿಯ ದಾರಿಗಳಲ್ಲಿ ಜನರು ನುಗ್ಗಿದ್ದರಿಂದ ಎಲ್ಲಡೆಯೂ ಅವ್ಯವಸ್ಥೆ ಆಯಿತು. ಶಾಂತಿ ಕಾಪಾಡುವಂತೆ ಸ್ಟಾಲಿನ್‌ ಮನವಿ ಮಾಡಿಕೊಂಡ ಬಳಿಕವೇ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂತು. 

ಚೆನ್ನೈ ನಗರ ಮತ್ತು ಹೊರ ವಲಯಗಳಲ್ಲಿ ಬಂದ್‌ನಂತಹ ಸ್ಥಿತಿ ಇತ್ತು. 

 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !