ರಜನಿಕಾಂತ್, ಪಳನಿಸ್ವಾಮಿ ಸೇರಿ ಗಣ್ಯರಿಂದ ಕರುಣಾನಿಧಿಗೆ ಅಂತಿಮ ನಮನ

7
ತಮಿಳುನಾಡಿಗೆ ತುಂಬಲಾರದ ನಷ್ಟ: ಸಿಎಂ

ರಜನಿಕಾಂತ್, ಪಳನಿಸ್ವಾಮಿ ಸೇರಿ ಗಣ್ಯರಿಂದ ಕರುಣಾನಿಧಿಗೆ ಅಂತಿಮ ನಮನ

Published:
Updated:

ಚೆನ್ನೈ: ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಅಗಲಿಕೆಯಿಂದ ತಮಿಳುನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಹೇಳಿದರು.

ಅವರು ನಗರದ ರಾಜಾಜಿ ಭವನದಲ್ಲಿ ಇರಿಸಲಾಗಿರುವ ಕರುಣಾನಿಧಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.

ಉಪ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ, ನಟ ರಜನಿಕಾಂತ್ ಕೂಡ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ರಾಜಾಜಿ ಭವನಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಅವರು ಕರುಣಾನಿಧಿ ಅಂತಿಮ ದರ್ಶನ ಪಡೆದರು.

ಪ್ರಧಾನಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕರುಣಾನಿಧಿ ಅವರಿಗೆ ಅಂತಿಮ ನಮನ ಸಲ್ಲಿಸಲು ಚೆನ್ನೈಗೆ ತೆರಳುವ ನಿರೀಕ್ಷೆ ಇದೆ.

ಇನ್ನಷ್ಟು ಸುದ್ದಿ...

ಕರುಣಾನಿಧಿ ಎಂಬ ದ್ರಾವಿಡ ಸೂರ್ಯ ಅಸ್ತಂಗತ

ಬಡವರ ಆಸ್ಪತ್ರೆ ಆಗಲಿರುವ ಕರುಣಾನಿಧಿ ನಿವಾಸ

ದ್ರಾವಿಡ ಆಂದೋಲನದ ಕೋಟೆ ಕಟ್ಟಿದ್ದ ರಾಜಕೀಯ ಪ್ರತಿಭೆ

ಜಯಲಲಿತಾ- ಕರುಣಾನಿಧಿ 'ಸೇಡಿನ ರಾಜಕೀಯ'ದ ಪುಟ ತಿರುವಿದಾಗ...

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !