ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶಿ ವಿಶ್ವನಾಥ ದೇವಸ್ಥಾನದ ಗರ್ಭಗುಡಿ ಪ್ರವೇಶ ನಿಷೇಧ

Last Updated 17 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಲಖನೌ: ಕಾಶಿ ವಿಶ್ವನಾಥ ದೇವಸ್ಥಾನದ ಗರ್ಭಗುಡಿ ಪ್ರವೇಶವನ್ನು ಭಕ್ತರಿಗೆ ನಿಷೇಧಿಸಲಾಗಿದೆ.

ಶ್ರಾವಣ ಮಾಸವಾದ್ದರಿಂದ ದೇವಸ್ಥಾನಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದ ಜನಜಂಗುಳಿಯನ್ನು ನಿಯಂತ್ರಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

‘ಗರ್ಭಗುಡಿಯ ದ್ವಾರದ ಮೂಲಕವೇ ಭಕ್ತರಿಗೆ ಪವಿತ್ರ ಜಲ ನೀಡಲಾಗುತ್ತದೆ. ಗರ್ಭಗುಡಿಯ ಪ್ರವೇಶಕ್ಕೆ ನಾಲ್ಕು ದ್ವಾರಗಳಿವೆ. ಹಿಂದೆ ಎರಡು ದ್ವಾರ ಒಳಗೆ ಬರಲು ಮತ್ತು ಎರಡು ದ್ವಾರವನ್ನು ಹೊರಕ್ಕೆ ಹೋಗಲು ಬಳಸಲಾಗುತ್ತಿತ್ತು. ಈಗ ನಾಲ್ಕು ದ್ವಾರಗಳನ್ನು ಪವಿತ್ರ ಜಲ ನೀಡಲು ಬಳಸಲಾಗುತ್ತಿದೆ’ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ತಾತ್ಕಾಲಿಕವಾಗಿ ಈ ವ್ಯವಸ್ಥೆ ಮಾಡಲಾಗಿದ್ದು, ಇದು ಯಶಸ್ವಿಯಾದರೆ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT