'ಕಲ್ಲು ತೂರಾಟಗಾರ'ರೆಂದು ಹೀಯಾಳಿಸಿ ಕಾಶ್ಮೀರದ ವ್ಯಾಪಾರಿಗಳ ಮೇಲೆ ಹಲ್ಲೆ

ಸೋಮವಾರ, ಮಾರ್ಚ್ 25, 2019
24 °C

'ಕಲ್ಲು ತೂರಾಟಗಾರ'ರೆಂದು ಹೀಯಾಳಿಸಿ ಕಾಶ್ಮೀರದ ವ್ಯಾಪಾರಿಗಳ ಮೇಲೆ ಹಲ್ಲೆ

Published:
Updated:

ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಕಾಶ್ಮೀರ ಮೂಲದ ಇ ಬೀದಿ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ ಸ್ಥಳೀಯ ಬಲಪಂಥೀಯ ಸಂಘಟನೆಯ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕಳೆದ ತಿಂಗಳು ಪುಲ್ವಾಮದಲ್ಲಿ ಭಯೋತ್ಪಾದನಾ ದಾಳಿ ನಂತರ ಕಾಶ್ಮೀರ ಮೂಲದ ಜನರ ವಿರುದ್ಧ  ಉತ್ತರ ಪ್ರದೇಶದಲ್ಲಿ ಆಕ್ರೋಶವೆದ್ದಿದೆ.

ಲಖನೌ‍ದ ಜನ ನಿಬಿಡ ರಸ್ತೆಯಲ್ಲಿ ಬೀದಿ ವ್ಯಾಪಾರಿಗಳನ್ನು ಕಲ್ಲುತೂರಾಟಗಾರರೆಂದು ಹೀಯಾಳಿಸಿ ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಈ ಪ್ರಕರಣದಲ್ಲಿ ವಿಶ್ವ ಹಿಂದೂ ದಳದ ಕಾರ್ಯಕರ್ತರಾದ  ಬಜರಂಗ್ ಸೋನ್ಕರ್, ಅಮರ್ ಕುಮಾರ್, ಅನಿರುದ್ಧ್ ಕುಮಾರ್ ಮತ್ತು ಹಿಮಾಂಶು ಗಾರ್ಗ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಕರ್ತರ ಬಂಧನವನ್ನು ವಿರೋಧಿಸಿ ಅಂಬುಜಾ ನಿಗಮ್ ಅವರ ನೇತೃತ್ವದಲ್ಲಿ ವಿಶ್ವ ಹಿಂದೂ ದಳದ ಕೆಲವು ಕಾರ್ಯಕರ್ತರು ಹಜರತ್‍ಗಂಜ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಶಾಂತಿ ಕದಡಲು ಯತ್ನಿಸಿದ ಆರೋಪದಲ್ಲಿ ಮತ್ತು ಹಿಂಸಾಚಾರ, ಹಲ್ಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಲಖನೌ ಪೊಲೀಸ್ ಅಧಿಕಾರಿ ಕಲಾನಿಧಿ ನೈತಾನಿ ಹೇಳಿದ್ದಾರೆ. ಇವರ ವಿರುದ್ಧ  ಧರ್ಮ, ಜಾತಿ ಮತ್ತು ಪ್ರಾದೇಶಿಕ ರಾಜ್ಯದ ಹೆಸರಿನಲ್ಲಿ ಶತ್ರುತ್ವ, ಕೊಲೆ ಯತ್ನ ಆರೋಪ ಪ್ರಕರಣ ಕೂಡಾ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 3

  Sad
 • 0

  Frustrated
 • 7

  Angry

Comments:

0 comments

Write the first review for this !