ಫೇಸ್‌ಬುಕ್ ಮೂಲಕ ಉಗ್ರ ಸಂಘಟನೆ ಸೇರ್ಪಡೆಗೆ ಪ್ರಚೋದನೆ: ಕಾಶ್ಮೀರದ ಮಹಿಳೆ ಬಂಧನ

7

ಫೇಸ್‌ಬುಕ್ ಮೂಲಕ ಉಗ್ರ ಸಂಘಟನೆ ಸೇರ್ಪಡೆಗೆ ಪ್ರಚೋದನೆ: ಕಾಶ್ಮೀರದ ಮಹಿಳೆ ಬಂಧನ

Published:
Updated:

ಶ್ರೀನಗರ: ಫೇಸ್‌ಬುಕ್ ಬಳಸಿಕೊಂಡು ಕಾಶ್ಮೀರದ ಯುವಕರನ್ನು ಉಗ್ರಗಾಮಿ ಸಂಘಟನೆ ಸೇರುವಂತೆ ಪ್ರಚೋದಿಸಿದ ಆರೋಪದ ಮೇಲೆ ಶಾಜಿಯಾ ಎಂಬ ಮಹಿಳೆಯನ್ನು ಭದ್ರತಾ ಪಡೆಗಳು ಬಂಧಿಸಿವೆ.

ಬಂಡಿಪೊರಾದ ಸಂಬಾಲ್ ಪ್ರದೇಶ ನಿವಾಸಿಯಾದ ಶಾಜಿಯಾ ಫೇಸ್‌ಬುಕ್ ಮಾಹಿತಿ ಗಮನಿಸಿದ ಭದ್ರತಾಪಡೆಗಳು ಶಂಕೆಯ ಮೇಲೆ ಅವರನ್ನು ಬಂಧಿಸಿವೆ. ಅನಂತನಾಗ್ ಜಿಲ್ಲೆಯ ಯುವಕರಿಗೆ ಸ್ಫೋಟಕ ಪೂರೈಸಿರುವ ಅಂಶ ವಿಚಾರಣೆ ಕಂಡುಬಂದಿದೆ. 

ಶಾಜಿಯಾಗೆ ಇಬ್ಬರು ಮಕ್ಕಳಿದ್ದಾರೆ. ಇವರು ಪೊಲೀಸರ ಮಾಹಿತಿದಾರರು ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಇವರು ನೀಡಿದ ಮಾಹಿತಿ ಮೇರೆಗೆ ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದರು. ಉಗ್ರರ ಬಗ್ಗೆ ಮಾಹಿತಿ ನೀಡುವ ಭರವಸೆ ನೀಡಿ ಪೊಲೀಸರಿಂದ ಶಾಜಿಯಾ ಕೆಲವು ಮಾಹಿತಿ ಪಡೆದುಕೊಳ್ಳುತ್ತಿದ್ದರು. ಹೀಗಾಗಿ ಪೊಲೀಸರು ಇವರ ಮೇಲೆ ನಿಗಾ ವಹಿಸಿದ್ದರು. 

ಪೊಲೀಸರಿಂದ ಮಾಹಿತಿಯನ್ನು ಪಡೆಯುವ ಉದ್ದೇಶದಿಂದ ಉಗ್ರರು ಶಾಜಿಯಾ ಅವರನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

ಲಯಪೊರಾ ಹೊರವಲಯದಲ್ಲಿ 20 ಗ್ರೆನೇಡ್‌ಗಳನ್ನು ಸಾಗಿಸುತ್ತಿದ್ದ ಐಸಿಯಾ ಜಾನ್ ಎಂಬುವರನ್ನು ಪೊಲೀಸರು ಬಂಧಿಸಿದ ವಾರದ ಬಳಿಕ ಶಾಜಿಯಾ ಬಂಧನವಾಗಿದೆ. ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ನಗರದೊಳಕ್ಕೆ ಸಾಗಿಸುತ್ತಿದ್ಧಾರೆ ಎಂಬ ಮಾಹಿತಿ ಮೇರೆಗೆ ಐಸಿಯಾ ಬಂಧನವಾಗಿತ್ತು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !