ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನಿಮ್ಮ ಅಲಿ ನಿಮ್ಮಲ್ಲಿಯೇ ಇರಲಿ, ನಮಗೆ ಬಜರಂಗ ಬಲಿ ಸಾಕು': ಯೋಗಿ ಆದಿತ್ಯನಾಥ

Last Updated 25 ನವೆಂಬರ್ 2018, 5:13 IST
ಅಕ್ಷರ ಗಾತ್ರ

ಭೋಪಾಲ್: ಅಲ್ಪ ಸಂಖ್ಯಾತ ಸಮುದಾಯದ ಶೇ. 90ರಷ್ಟು ಮತಗಳು ಕಾಂಗ್ರೆಸ್‍ಗೆ ಸಿಗುವಂತೆಮುಸ್ಲಿಂ ನಾಯಕರು ಪ್ರಯತ್ನಿಸಬೇಕುಎಂದು ಕಾಂಗ್ರೆಸ್ ನಾಯಕ ಕಮಲ್ ನಾಥ್ ಹೇಳಿದ್ದರು.ಕಮಲ್ ನಾಥ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ,'ನಿಮ್ಮ ಅಲಿ ನಿಮ್ಮಲ್ಲಿಯೇ ಇರಲಿ, ನಮಗೆ ಬಜರಂಗ ಬಲಿ ಸಾಕು' ಎಂದಿದ್ದಾರೆ.

ಶನಿವಾರ ಮಧ್ಯಪ್ರದೇಶದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಭಾಷಣ ಮಾಡಿದ ಆದಿತ್ಯನಾಥ, ಕಾಂಗ್ರೆಸ್‌ನವರಿಗೆ ಎಸ್‍ಸಿ/ ಎಸ್‍ಟಿ ಮತಗಳು ಬೇಡ.ಅವರಿಗೆ ಮುಸ್ಲಿಮರ ಮತ ಸಾಕು ಎಂದು ಕಮಲ್ ನಾಥ್ ಹೇಳಿಕೆ ನೀಡಿರುವುದನ್ನು ನಾನು ಇತ್ತೀಚೆಗೆ ಓದಿದ್ದೆ. ಏತನ್ಮಧ್ಯೆ, ಪ್ರವಾದಿ ಮೊಹಮ್ಮದ್‍ನ ಉತ್ತರಾಧಿಕಾರಿಯಾದ ಅಲಿ ಮುಸ್ಲಿಮರಿಗೆ ಇದ್ದರೆ, ಬಜರಂಗ ಬಲಿ (ಹನುಮಾನ್) ನಮಗಿದ್ದಾರೆ ಎಂದಿದ್ದಾರೆ.

ಕಮಲ್ ನಾಥ್ ಅವರು ಮತ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದಾಗ್ಯೂ, ಮತ ಪಡೆಯಲು ಈ ರೀತಿ ಹೇಳುವುದರಲ್ಲಿ ತಪ್ಪೇನಿಲ್ಲ ಎಂದು ಕಾಂಗ್ರೆಸ್ ಸಮಜಾಯಿಷಿ ನೀಡಿದೆ.

ರ‍್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ ಯೋಗಿ, ಮಧ್ಯಪ್ರದೇಶ ಮತ್ತು ಚತ್ತೀಸ್‍ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದರೆ, 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ.ಆದರೆ ಪಂಜಾಬ್‍ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್, ಅಲ್ಲಿ ಯಾಕೆ ಏನೂ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ನವೆಂಬರ್ 28ರಂದು ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು, ಇನ್ನೊಂದು ಬಾರಿ ಅಧಿಕಾರಕ್ಕೇರಲು ಬಿಜೆಪಿ ಹವಣಿಸುತ್ತಿದೆ. ಇತ್ತ 15 ವರ್ಷಗಳ ನಂತರ ಅಧಿಕಾರಕ್ಕೇರಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT