5 ಲಕ್ಷ ಸಸಿ ನೆಡುವ ಬೃಹತ್‌ ಆಂದೋಲನಕ್ಕೆ ಕೇಜ್ರಿವಾಲ್‌ ಚಾಲನೆ

7

5 ಲಕ್ಷ ಸಸಿ ನೆಡುವ ಬೃಹತ್‌ ಆಂದೋಲನಕ್ಕೆ ಕೇಜ್ರಿವಾಲ್‌ ಚಾಲನೆ

Published:
Updated:

ನವದೆಹಲಿ: ಮಾಲಿನ್ಯ ತಗ್ಗಿಸಲು ನಗರದಲ್ಲಿ ಒಂದೇ ದಿನ 5 ಲಕ್ಷ ಸಸಿಗಳನ್ನು ನೆಡುವ ಬೃಹತ್‌ ಆಂದೋಲನಕ್ಕೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶನಿವಾರ ಚಾಲನೆ ನೀಡಿದರು.

ದೆಹಲಿಯ ಆಮ್‌ ಆದ್ಮಿ ಪಕ್ಷದ ಸರ್ಕಾರ ಕೈಗೊಂಡಿರುವ ಮಹತ್ವದ ಈ ಯೋಜನೆಗೆ ಸಾವಿರಾರು ಜನರು ಸ್ವಯಂ ಪ್ರೇರಿತವಾಗಿ ಕೈಜೋಡಿಸಿದ್ದಾರೆ.

ಯಮನಾ ನದಿಯ ಪ್ರವಾಹ ಪ್ರದೇಶ ಉಸ್ಮಾನ್‌ಪುರದ ಗಾರಿಮಂಡುವಿನಲ್ಲಿ ಸಸಿ ನೆಟ್ಟು ಮಾತನಾಡಿದ ಅರವಿಂದ್‌ ಕೇಜ್ರಿವಾಲ್‌, ‘ದೆಹಲಿಯ ಶೇಕಡ 70ರಷ್ಟು ವಾಯುಮಾಲಿನ್ಯಕ್ಕೆ ಗಡಿ ಭಾಗಗಳ ಆಚೆಗಿನ ಸಂಗತಿಗಳು ಕಾರಣವೆಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಈ ಪರಿಸ್ಥಿತಿಯನ್ನು ನಾವು ನಿಯಂತ್ರಿಸದಿದ್ದರೆ ನಮಗೆ ಕ್ಷಮೆ ಎಂಬುದೇ ಇರುವುದಿಲ್ಲ. ಮಾಲಿನ್ಯ ತಡೆಗಟ್ಟಲು ಬೃಹತ್‌ ಸಂಖ್ಯೆಯಲ್ಲಿ ಗಿಡಮರಗಳನ್ನು ಬೆಳೆಸಲೇಬೇಕಾಗಿದೆ’ ಎಂದರು.

ವಾಯುಮಾಲಿನ್ಯ ತಗ್ಗಿಸಲು ಇಡೀ ನಗರದಾದ್ಯಂತ 600 ಸ್ಥಳಗಳಲ್ಲಿ ಕೈಗೊಂಡಿರುವ ಈ ಆಂದೋಲನದಲ್ಲಿ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ಮತ್ತು ನಿವಾಸಿಗಳು ಪಾಲ್ಗೊಂಡು, ಸಸಿಗಳನ್ನು ನೆಟ್ಟಿದ್ದಾರೆ. ಉಸ್ಮಾನ್‌ಪುರದ ಗಾರಿಮಂಡುವಿನಲ್ಲಿ 32,000 ಸಸಿಗಳನ್ನು ನೆಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !