7

ದಂಡ ತೆತ್ತ ರಾಜಭವನ

Published:
Updated:

ತಿರುವನಂತಪುರ: ತಮ್ಮ ಅಧಿಕೃತ ಕಾರು ವೇಗ ಮಿತಿ ಉಲ್ಲಂಘಿಸಿದ್ದಕ್ಕಾಗಿ ಅಗತ್ಯ ದಂಡ ಪಾವತಿಸುವಂತೆ ಕೇರಳ ರಾಜ್ಯಪಾಲ ಪಿ. ಸದಾಶಿವಂ ತಮ್ಮ ಕಚೇರಿ ಸಿಬ್ಬಂದಿಗೆ ಸೂಚಿಸಿದ್ದಾರೆ.

ಎರಡು ತಿಂಗಳ ಹಿಂದೆ ಈ ಉಲ್ಲಂಘನೆ ನಡೆದ ವೇಳೆ ರಾಜ್ಯಪಾಲರು ಕಾರಿನಲ್ಲಿ ಇರಲಿಲ್ಲ. ಆದರೆ, ಅವರ ಕಾರು ಚಾಲಕ ಸಂಚಾರ ನಿಯಮ ಉಲ್ಲಂಘಿಸಿದ್ದುದು ವೇಗ ನಿಯಂತ್ರಣ ಪತ್ತೆ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಇದನ್ನು ಆಧರಿಸಿ ಸಾರಿಗೆ ಇಲಾಖೆ ಇತ್ತೀಚೆಗೆ ರಾಜಭವನಕ್ಕೆ ಚಲನ್‌ ಕಳುಹಿಸಿತ್ತು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !