ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ಸಾಮರಸ್ಯ ಸಂದೇಶ: ಕೇರಳ ಚರ್ಚಿನಲ್ಲಿ ಮುಸ್ಲಿಮರಿಂದ ಪ್ರಾರ್ಥನೆ

Last Updated 30 ಡಿಸೆಂಬರ್ 2019, 8:04 IST
ಅಕ್ಷರ ಗಾತ್ರ

ತಿರುವನಂತಪುರ: ದೇಶದಲ್ಲಿ ಕೋಮುವಾದದ ಚರ್ಚೆಗಳು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳ ನಡುವೆ ಕೇರಳ ಕೋಮ ಸಾಮರಸ್ಯದ ಸಂದೇಶ ರವಾನಿಸಿದೆ.

ಕೇರಳದ ಎರ್ನಾಕುಲಂ ನಗರದ ಹೊರವಲಯದಲ್ಲಿರುವ ಕೊತ್ತಮಂಗಲಂ ಚರ್ಚ್‌ನಲ್ಲಿ ಮುಸ್ಲಿಂ ಸಮುದಾಯದವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಇತ್ತೀಚೆಗೆ ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಚರ್ಚ್‌ವೊಂದರಲ್ಲಿ ಯುವಕರು ಮುಸ್ಲಿಂ ಸಮುದಾಯದ ಉಡುಪು ತೊಟ್ಟು ‘ಮಪಿಲಪಟ್ಟು‘ (ಮುಸ್ಲಿಂ ಸಮುದಾಯದವರು ಹಾಡುವ ಜನಪದ ಗೀತೆ) ಗೀತೆಯನ್ನು ಹಾಡಿದ್ದರು.

ಕೊತ್ತಮಂಗಲಂನ ಸೆಂಟ್‌ ಥಾಮಸ್‌ ಚರ್ಚ್‌ ಮರ್‌ ಥೋಮಾ ಚೆರಿಯಪಲ್ಲಿ ಚರ್ಚ್‌ ಎಂದೇ ಪ್ರಸಿದ್ಧವಾಗಿದೆ. ಇಲ್ಲಿ ಇದೀಗ ನಮಾಜ್‌ಗೆ ಅವಕಾಶ ಮಾಡಿಕೊಡುವ ಮೂಲಕ ಕೋಮ ಸಾಮರಸ್ಯವನ್ನು ಸಾರಿದೆ. ಶತಮಾನದ ಇತಿಹಾಸ ಇರುವ ಈ ಚರ್ಚ್‌ನಲ್ಲಿ ಈ ಹಿಂದೆ ವಾರ್ಷಿಕ ಸಮಾರಂಭವೊಂದರಲ್ಲಿ ದೀಪಗಳನ್ನು ಬೆಳಗಿಸಿ ಸಹಬಾಳ್ವೆಯ ಬೆಳಕು ಪಸರಿಸಲಾಗಿತ್ತು.

ಕಳೆದ ಶನಿವಾರ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಈ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದರು.ಚರ್ಚಿನ ಫಾದರ್‌ ಜೊಸ್‌ ಪಾರ್ಥುವಯಲಿಲ್‌ ಪ್ರಜಾವಾಣಿ ಜೊತೆ ಮಾತನಾಡಿ, ಈ ಚರ್ಚ್‌ ಒಂದು ಯಾತ್ರಾ ಸ್ಥಳವಾಗಿದೆ, ಎಲ್ಲಾ ಸಮುದಾಯದ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೇ ಮೊದಲ ಬಾರಿಗೆ ನಮಾಜ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಸಹೋದರತೆ ಸಾರುವುದು ನಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಮುಖಂಡ ಸೈಯದ್‌ ಮುನ್ನಾವರ್‌ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕೊಟ್ಟಿರುವುದು ಸ್ವಾಗತಾರ್ಹ ಎಂದಿದ್ದಾರೆ. ಯುವ ಕಾಂಗ್ರೆಸ್‌ ಮುಖಂಡ ಮ್ಯಾಥ್ಯೂ ಪ್ರತಿಕ್ರಿಯಿಸಿ, ಚರ್ಚ್‌ನ ಈ ಸಾಮರಸ್ಯದ ನಡಿಗೆಯಿಂದ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT