ಕೇರಳ ಮಳೆ, 13 ಜಿಲ್ಲೆಗಳಲ್ಲಿ ಪ್ರವಾಹದ ಎಚ್ಚರಿಕೆ: ಮೃತರ ಸಂಖ್ಯೆ 108ಕ್ಕೆ ಏರಿಕೆ

7

ಕೇರಳ ಮಳೆ, 13 ಜಿಲ್ಲೆಗಳಲ್ಲಿ ಪ್ರವಾಹದ ಎಚ್ಚರಿಕೆ: ಮೃತರ ಸಂಖ್ಯೆ 108ಕ್ಕೆ ಏರಿಕೆ

Published:
Updated:

ತಿರುವನಂತಪುರ/ಕೊಚ್ಚಿ/ಕೊಟ್ಟಾಯಂ: ದೇವರನಾಡಿನಲ್ಲಿ ವರುಣನ ಅಬ್ಬರ ಶುಕ್ರವಾರವೂ ಮುಂದುವರಿದಿದ್ದು 13 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು ಕಳೆದ ಎರಡು ದಿನಗಳಲ್ಲಿ ಸಾವಿಗೀಡಾದವರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ.

ತ್ರಿಶೂರ್, ಕಣ್ಣೂರ್‌ ಹಾಗೂ ಕೋಯಿಕ್ಕೋಡ್‌, ಪಥನಂತಿಟ್ಟ, ಎರ್ನಾಕುಲಂ, ಅಲಪುಳ ಜಿಲ್ಲೆಗಳಲ್ಲಿ ಪ್ರವಾಹ ಮುಂದುವರಿದಿದೆ. ಜಲಾವೃತಗೊಂಡಿರುವ ಮನೆಗಳಲ್ಲಿ ಸಿಲುಕಿಕೊಂಡಿರುವ ಜನರನ್ನು ಸೇನಾ ಪಡೆಗಳು ಮತ್ತು ಎನ್‌ಡಿಆರ್‌ಎಫ್‌ ಸಿಬ್ಬಂದಿ ಹೆಲಿಕಾಪ್ಟರ್‌ ಮತ್ತು ದೋಣಿಗಳಲ್ಲಿ ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

ಇದನ್ನೂ ಓದಿರಿ..
ಇನ್ನೂ ಆರು ದಿನ ಭಾರಿ ಮಳೆ ಸಾಧ್ಯತೆ

ಮುಳುಗಡೆ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸ ಮುಂದುವರಿದಿದೆ. ಕೊಚ್ಚಿಯಲ್ಲಿ ರೈಲು ಮತ್ತು ವಿಮಾನ ಸಾರಿಗೆ ಸಂಪೂರ್ಣವಾಗಿ ಬಂದ್‌ ಆಗಿದೆ. 

ಪರಿಹಾರ ಕಾರ್ಯಾಚರಣೆಗೆ ಕೇಂದ್ರ ಸರ್ಕಾರದ ಸೇನಾಪಡೆಯ ವಿಶೇಷ ತಂಡಗಳು ಮತ್ತು ಎನ್‌ಡಿಆರ್‌ಎಫ್‌ನಿಂದ 40 ಹೆಚ್ಚುವರಿ ತಂಡಗಳು ಕೆಲಸ ಮಾಡುತ್ತಿವೆ. 

ಇಂದು ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಣೆ ಮಾಡಲಿದ್ದಾರೆ. ಈಗಾಗಲೇ ಅಗತ್ಯ ನೆರವನ್ನು ಪ್ರಧಾನಿಗಳು ಘೋಷಣೆ ಮಾಡಿದ್ದಾರೆ.  

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 6

  Sad
 • 0

  Frustrated
 • 2

  Angry

Comments:

0 comments

Write the first review for this !