ಕೇರಳಕ್ಕೆ ₹ 500 ಕೋಟಿ ತುರ್ತು ಪರಿಹಾರ

7

ಕೇರಳಕ್ಕೆ ₹ 500 ಕೋಟಿ ತುರ್ತು ಪರಿಹಾರ

Published:
Updated:

ಕೊಚ್ಚಿ: ಮಳೆಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ₹ 500 ಕೋಟಿ ತುರ್ತು ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಇನ್ನಿತರ ಪರಿಹಾರ ಕ್ರಮಗಳನ್ನು ಸೂಚಿಸಿದ್ದಾರೆ.

* ಪ್ರಧಾನ ಮಂತ್ರಿ ವಸತಿ ಯೋಜನೆ ಅಡಿ ಹೊಸ ಮನೆಗಳ ನಿರ್ಮಾಣದ ಭರವಸೆ

* ಹಾನಿಗೊಳಗಾರುವ ರಸ್ತೆ, ಶಾಲಾಕಟ್ಟಡಗಳು ಮತ್ತು ಸೇತುವೆಗಳ ಮರುನಿರ್ಮಾಣಕ್ಕೆ ನರೇಗಾ ಯೋಜನೆ ಅಡಿ ನೆರವು

* ಹಾನಿಗೊಳಗಾಗಿರುವ ಹೆದ್ದಾರಿಗಳನ್ನು ತಕ್ಷಣವೇ ನಿರ್ಮಿಸಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ

* ಬೆಳೆವಿಮೆಯ ಪರಿಹಾರಗಳನ್ನು ತಕ್ಷಣವೇ ಬಿಡುಗಡೆ ಮಾಡಿ ಎಂದು ವಿಮಾ ಕಂಪನಿಗಳಿಗೆ ಸೂಚನೆ

**

ಪರಿಹಾರ ಸಾಲದು

‘ಕೇಂದ್ರ ಸರ್ಕಾರ ಈಗ ನೀಡಿರುವ ಪರಿಹಾರ ಸಾಲದು. ಆದರೆ ಮತ್ತಷ್ಟು ಪರಿಹಾರ ನೀಡುತ್ತೇವೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. ಈಗ ₹ 20 ಸಾವಿರ ಕೋಟಿಯಷ್ಟು ನಷ್ಟವನ್ನು ಅಂದಾಜಿಸಲಾಗಿದೆ. ನೀರು ಇಳಿದ ನಂತರ ನಷ್ಟ ಎಷ್ಟು ಎಂದು ತಿಳಿಯಲಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

**

ಶೀಘ್ರ ಮತ್ತಷ್ಟು ಪರಿಹಾರವನ್ನು ಒದಗಿಸುತ್ತೇವೆ. ಪರಿಹಾರ ಕಾರ್ಯವನ್ನು ಚುರುಕುಗೊಳಿಸಲಾಗುತ್ತದೆ ಸಂಕಷ್ಟದಲ್ಲಿರುವ ಕೇರಳದ ನೆರವಿಗೆ ಇಡೀ ದೇಶವೇ ನಿಲ್ಲಲಿದೆ.
–ನರೇಂದ್ರ ಮೋದಿ, ಪ್ರಧಾನಿ

ಇದನ್ನೂ ಓದಿ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !