ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೇಬ್ರಿಯಲ್‌ ಸೇನೆ’ ಸ್ಥಾಪಿಸಿದ ಚರ್ಚ್‌

Last Updated 7 ನವೆಂಬರ್ 2019, 17:26 IST
ಅಕ್ಷರ ಗಾತ್ರ

ತಿರುವನಂತಪುರ: ಸೇನೆಯ ಮಾಜಿ ಯೋಧರು ಮತ್ತು ನಿವೃತ್ತ ಪೊಲೀಸರನ್ನು ಒಳಗೊಂಡ ಸುಮಾರು 100 ಸದಸ್ಯರಿರುವ ‘ಗೇಬ್ರಿಯಲ್‌ ಸೇನಾ’ ರಚಿಸಿರುವ ಇಲ್ಲಿನ ಚರ್ಚ್‌ವೊಂದರ ಕ್ರಮ ಹಲವರ ಹುಬ್ಬೇರಿಸಿದೆ.

ಬಿಷಪ್‌ ವಿರುದ್ಧದ ಅತ್ಯಾಚಾರ, ಭೂ ಹಗರಣ ಆರೋಪಗಳು, ಸಾವಿರಕ್ಕೂ ಅಧಿಕ ಚರ್ಚ್‌ಗಳಲ್ಲಿ ಪ್ರಾಬಲ್ಯ ಸಾಧಿಸಲು ಗುಂಪುಗಳ ನಡುವೆ ತಿಕ್ಕಾಟ ನಡೆದರುವ ಸಂದರ್ಭದಲ್ಲಿಯೇ ಈ ಕ್ರಮಕ್ಕೆ ಚರ್ಚ್‌ ಮುಂದಾಗಿದೆ.

ಕಣ್ಣೂರು ಜಿಲ್ಲೆಯ ತಲಚೇರಿಯ ಆರ್ಚ್ ಬಿಷಪ್‌ ಅವರು ‘ಗೇಬ್ರಿಯಲ್ ಸೇನಾ’ ರಚಿಸಿದ್ದಾರೆ. ಹನುಮಾನ್‌ ಸೇನಾ ಮತ್ತು ಅಯ್ಯಪ್ಪ ಧರ್ಮಸೇನಾ ಮಾದರಿಯಲ್ಲಿ ಇದು ರಚನೆಯಾಗಿದೆ ಎಂಬ ಆತಂಕವೂ ವ್ಯಕ್ತವಾಗಿದೆ.

ಚರ್ಚ್‌ನ ಆಡಳಿತವು, ‘ಡಿ.9ರಂದು ಕಣ್ಣೂರಿನ ಎರಡು ಜಿಲ್ಲೆಗಳಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆ ಹೊತ್ತಿನಲ್ಲಿ ಗುಂಪು, ವಾಹನ ಸಂಚಾರ ನಿರ್ವಹಣೆ ಉದ್ದೇಶದಿಂದ ರಚಿಸಲಾಗಿದೆ’ ಎಂದು ಹೇಳಿದೆ.

ತಲಚೇರಿ ಆರ್ಚ್ ಬಿಷಪ್‌ ಫಾ.ಮ್ಯಾಥ್ಯೂ ಅಸರಿಪರಂಬಿಲ್‌ ಅವರು, ‘ಡಿ.9ರಂದು ಉತ್ತರ ಮಲಬಾರ್ ರೈತರು ಪ್ರತಿಭಟನೆ ನಡೆಸಲಿರುವ ಕಾರಣ ರಚಿಸಿರುವ ಸೇವಾ ಸಂಸ್ಥೆಯಾಗಿದ್ದು ಆ ಬಳಿಕ ಇದರ ಅಸ್ತಿತ್ವ ಅಂತ್ಯವಾಗಲಿದೆ’ ಎಂದು ತಿಳಿಸಿದರು.

ಮಾಜಿ ಪೊಲೀಸ್ ಮಹಾನಿರ್ದೇಶಕ ಅಲೆಕ್ಸಾಂಡರ್ ಜಾಕೋಬ್ ಅವರು, ‘ಏನು ಹೆಸರಿಡಲಾಗಿದೆ ಎಂಬುದು ಮುಖ್ಯವಲ್ಲ, ಏನು ಕೆಲಸ ಮಾಡುತ್ತದೇ ಎಂಬುದೇ ಮುಖ್ಯ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT