ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘ ಪರಿವಾರಕ್ಕೆ ಕೇರಳದಲ್ಲಿ ಪ್ರತ್ಯೇಕ ಕಾನೂನು ಇಲ್ಲ: ಮೋದಿಗೆ ಪಿಣರಾಯಿ ತಿರುಗೇಟು

Last Updated 26 ಏಪ್ರಿಲ್ 2019, 15:36 IST
ಅಕ್ಷರ ಗಾತ್ರ

ತಿರುವನಂತಪುರಂ: ಕೇರಳದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಒಪ್ಪುವಂತದ್ದಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ವಾರಣಾಸಿಯಲ್ಲಿ ಭಾಷಣ ಮಾಡಿದ ಮೋದಿ ಕೇರಳದಲ್ಲಿ ಬಿಜೆಪಿಯವರಿಗೆ ಮನೆಯಿಂದ ಹೊರಗೆ ಕಾಲಿಡಲು ಭಯ ಪಡುವಪರಿಸ್ಥಿತಿ ಇದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಪಿಣರಾಯಿ, ಮೋದಿ ಯಾವ ಆಧಾರದಲ್ಲಿ ಈ ರೀತಿ ಹೇಳುತ್ತಿದ್ದಾರೆ? ಯಾವ ಬಿಜೆಪಿ ಕಾರ್ಯಕರ್ತನಿಗೆ ಮನೆಯಿಂದ ಹೊರಗೆ ಹೊರಡಿದರೆ ವಾಪಸ್ ಮರಳುತ್ತೇನೆ ಎಂಬ ನಂಬಿಕೆ ಇಲ್ಲದೇ ಇರುವುದು? ಎಂದು ಪ್ರಶ್ನಿಸಿದ್ದಾರೆ.

ಮೋದಿ ಹೇಳಿದ್ದೇನು?
ಶುಕ್ರವಾರ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಿದ ಮೋದಿ ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುತ್ತಾರೆ.ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತದೆ.ವಾರಣಾಸಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಸಮಸ್ಯೆಗಳೇನೂ ಇಲ್ಲ. ಆದರೆ ಕೇರಳ ಮತ್ತು ಬಂಗಾಳದಲ್ಲಿ ಕಾರ್ಯಕರ್ತರು ಕಷ್ಟಪಡುತ್ತಿದ್ದಾರೆ.ಅಲ್ಲಿ ಕಾರ್ಯಕರ್ತರನ್ನು ಜೈಲಿಗೆ ಹಾಕಲಾಗುತ್ತದೆ, ಹತ್ಯೆ ಮಾಡಲಾಗುತ್ತದೆ. ಅಲ್ಲಿನ ಪರಿಸ್ಥಿತಿಯನ್ನು ನೀವು ಅರ್ಥ ಮಾಡಿಕೊಳ್ಳಿ.

ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರು ಮರಳಿ ಬರುತ್ತೇನೆ ಎಂಬ ನಂಬಿಕೆಯೇ ಇಲ್ಲದೆ ಅವರ ಮನೆಯಿಂದ ಹೊರಡುತ್ತಾರೆ.ಮನೆಯಿಂದ ಹೊರಡುವಾಗ ಅಮ್ಮನಲ್ಲಿ ಹೇಳುತ್ತಾರೆ. ಅಮ್ಮಾ, ಬಿಜೆಪಿಯ ಕಾರ್ಯಕ್ಕಾಗಿ ಹೋಗುತ್ತಿದ್ದೇನೆ. ಸಂಜೆ ನಾನು ಜೀವಂತವಾಗಿ ಮರಳಿ ಬರದೇ ಇದ್ದರೆ ನಾಳೆಯಿಂದ ನನ್ನ ತಮ್ಮನನ್ನು ಕಳಿಸು ಅಂತಾರೆ. ಪಶ್ಚಿಮ ಬಂಗಾಳದಲ್ಲಿಯೂ ಇದೇ ಸ್ಥಿತಿ ಇದೆ. ವಾರಣಾಸಿಯಲ್ಲಿರುವ ಕಾರ್ಯಕರ್ತರಿಗೆ ಈ ರೀತಿಯ ಸಮಸ್ಯೆಗಳೇನೂ ಇಲ್ಲ. ಹಾಗಾಗಿ ಅತೀ ಹೆಚ್ಚು ಮತಗಳನ್ನು ಪಡೆಯಲು ಸಹಕರಿಸಬೇಕು.

ಪಿಣರಾಯಿ ಫೇಸ್‌ಬುಕ್ ಪೋಸ್ಟ್
ಮೋದಿ ಹೇಳಿಕೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೇರಳಿಗರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಇತ್ತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡಾ ಮೋದಿ ಹೇಳಿಕೆಗೆ ಫೇಸ್‌ಬುಕ್ ಪೋಸ್ಟ್ ಮೂಲಕವೇಪ್ರತಿಕ್ರಿಯಿಸಿದ್ದಾರೆ.

ದೇಶದಲ್ಲಿ ಸಮಾಧಾನ ಮತ್ತು ಕಾನೂನು ಪಾಲಿಸುವ ಕೇರಳ ಮತ್ತು ಕೇರಳದ ಜನತೆಯನ್ನು ಮೋದಿ ಸುಳ್ಳು ಹೇಳುವ ಮೂಲಕ ಅವಹೇಳನ ಮಾಡಿದ್ದು ಖಂಡನೀಯ. ದಾಳಿ ಮತ್ತು ಹತ್ಯಾ ಪ್ರಕರಣ ಅತೀ ಕಡಿಮೆ ಇರುವ ರಾಜ್ಯವಾಗಿದೆ ಕೇರಳ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲೆ ಘಟಕಹೇಳಿದೆ. ಈ ರೀತಿ ತಪ್ಪು ಹೇಳಿಕೆಗಳನ್ನು ನೀಡುವ ಹೇಳುವ ಮುನ್ನ ಪ್ರಧಾನಿ ಆ ಅಂಕಿ ಅಂಶಗಳನ್ನು ನೋಡಬೇಕಿತ್ತು.

ಸಂಘ ಪರಿವಾರಕ್ಕೆ ಸೇರಿದ ದಾಳಿಕೋರರಿಗೆ ರಕ್ಷಣೆ ಮತ್ತು ಪ್ರೋತ್ಸಾಹ ಲಭಿಸುವ ಪರಿಸ್ಥಿತಿ ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಬಿಜೆಪಿ ಆಡಳಿತಾರೂಢ ರಾಜ್ಯಗಳಲ್ಲಿದೆ.ಆದರೆ ಈ ರೀತಿಯ ರಕ್ಷಣೆ ಕೇರಳದಲ್ಲಿ ಸಿಗಲ್ಲ. ಇಲ್ಲಿ ಸಂಘ ಪರಿವಾರಕ್ಕೆ ಪ್ರತ್ಯೇಕ ಕಾನೂನುಗಳಿಲ್ಲ.ದಾಳಿ ನಡೆಸುವವರು ಯಾರೇ ಆದರೂ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ.

ಧರ್ಮದ ಹೆಸರಲ್ಲಿ ಸಂಘರ್ಷವುಂಟು ಮಾಡಿ ಜನರ ನೆಮ್ಮದಿ ಹಾಳು ಮಾಡಲು ಆರ್‌ಎಸ್ಎಸ್ಸದಾ ಪ್ರಯತ್ನಿಸುತ್ತಲೇ ಇರುತ್ತದೆ.ಇಂತದನ್ನು ಕೇರಳದ ಜನರು ಒಂದಾಗಿ ಎದುರಿಸುತ್ತಾರೆ.ಕೋಮುಗಲಭೆ, ದ್ವೇಷದ ರಾಜಕಾರಣಕ್ಕೆ ಕೇರಳದಲ್ಲಿ ಮಾತ್ರವಲ್ಲ ದೇಶದ ಜನರೇ ಈ ಚುನಾವಣೆ ಮೂಲಕ ಉತ್ತರಿಸುತ್ತಾರೆ ಎಂಬ ಭಯದಿಂದ ಮೋದಿ ಈ ರೀತಿ ಸತ್ಯಕ್ಕೆ ದೂರವಾದಆರೋಪಗಳನ್ನು ಮಾಡುತ್ತಿದ್ದಾರೆ.
ಯಾವುದೇ ಸುಳ್ಳುಗಳನ್ನು ನಾಚಿಕೆಯಿಲ್ಲದೆ ಪ್ರಚಾರ ಮಾಡುವವರು ಆರ್‌ಎಸ್‌ಎಸ್‌ನವರು, ಸುಳ್ಳುಗಳನ್ನು ಪ್ರಚಾರ ಮಾಡುವುದಕ್ಕೆ ಅವರಿಗೆ ಅವರದ್ದೇ ಆದ ರೀತಿ, ವ್ಯವಸ್ಥೆ ಇದೆ. ದೇಶದ ಹಲವುಭಾಗಗಳಲ್ಲಿ ಸಂಘರ್ಷವನ್ನು ಉಂಟು ಮಾಡಿದ್ದು ಇದೇ ರೀತಿ ಸುಳ್ಳುಗಳಿಂದಾಗಿದೆ. ಮತಸೌಹಾರ್ದದಿಂದ ಶಾಂತಿಯುತ ಜೀವನ ನಡೆಸುತ್ತಿರುವ ಕೇರಳದ ಬಗ್ಗೆ ಈ ರೀತಿಯ ಸುಳ್ಳು ಹೇಳುತ್ತಿರುವುದು ದೌರ್ಭಾಗ್ಯ ಎಂದು ಪಿಣರಾಯಿ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT