ಕೇರಳದ ಈ ಜೋಡಿ ರೂಪಿಸಿದ ‘ಕೆಮಿಸ್ಟ್ರಿ’ ಇನ್‌ವಿಟೇಶನ್ ವೈರಲ್ ಆಯ್ತು

7
ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ

ಕೇರಳದ ಈ ಜೋಡಿ ರೂಪಿಸಿದ ‘ಕೆಮಿಸ್ಟ್ರಿ’ ಇನ್‌ವಿಟೇಶನ್ ವೈರಲ್ ಆಯ್ತು

Published:
Updated:

ಬೆಂಗಳೂರು: ಕೇರಳದ ಜೋಡಿ ರೂಪಿಸಿರುವ ವಿವಾಹ ಆಮಂತ್ರಣ ಪತ್ರಿಕೆ (ಇನ್‌ವಿಟೇಶನ್) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈಚೆಗಷ್ಟೇ ಮದುವೆಯಾದ ವಿಥುನ್ ಮತ್ತು ಸೂರ್ಯ ರಸಾಯನಶಾಸ್ತ್ರದ ತತ್ವಗಳನ್ನೇ ಆಧರಿಸಿ ಇನ್‌ವಿಟೇಶನ್ ರೂಪಿಸಿಕೊಂಡಿದ್ದರು.

‘ಆಟಮ್‌ಗಳಾಗಿರುವ ವಿಥುನ್ ಮತ್ತು ಸೂರ್ಯ ಪೋಷಕರಿಂದ ಎನರ್ಜಿ ಪಡೆದು ಮಾಲಿಕ್ಯೂಲ್‌ಗಳಾಗಲು ನಿರ್ಧರಿಸಿದ್ದಾರೆ. ಈ ಜೋಡಿ ಜೊತೆಗೂಡುವ ಸಮಾರಂಭದಲ್ಲಿ ನಿಮ್ಮ ಉಪಸ್ಥಿತಿಯನ್ನು ಕೋರುತ್ತೇವೆ’ (The atoms Vithun and Soorya have decided to become a molecule with the activation energies of both parents. Requesting your latency with your reactants and products on the bonding ceremony). ಎನ್ನುವ ಒಕ್ಕಣೆ ಇನ್‌ವಿಟೇಶನ್‌ನಲ್ಲಿ ಇದೆ.

ಮದುವೆ ದಿನಾಂಕವನ್ನು ‘ರಿಯಾಕ್ಷನ್ ಆನ್’ ಎಂದು, ವಿವಾಹ ನಡೆಯುವ ಸ್ಥಳವನ್ನು ‘ಲ್ಯಾಬೊರೇಟರಿ’ ಎಂದು ನಮೂದಿಸಲಾಗಿದೆ. ಅವರಿಬ್ಬರ ಪ್ರೀತಿಯನ್ನು ಬಿಂಬಿಸುವ ನಕಾಶೆಯನ್ನೂ ಅಣು ವಿಜ್ಞಾನದ ಮಾದರಿಯಲ್ಲೇ ರೂಪಿಸಿರುವ ವಿಶೇಷ.

ಕಾಂಗ್ರೆಸ್ ನಾಯಕ ಶಶಿ ತರೂರ್ ಸೇರಿದಂತೆ ನೂರಾರು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಈ ಇನ್‌ವಿಟೇಶನ್‌ ಶೇರ್ ಮಾಡಿಕೊಂಡು, ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ.

ಬರಹ ಇಷ್ಟವಾಯಿತೆ?

 • 42

  Happy
 • 4

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !