ಪ್ರವಾಹಪೀಡಿತ ಕೇರಳ: ಪರಿಹಾರ ಕೇಂದ್ರಗಳಲ್ಲಿ 6 ಲಕ್ಷ ಜನ

7

ಪ್ರವಾಹಪೀಡಿತ ಕೇರಳ: ಪರಿಹಾರ ಕೇಂದ್ರಗಳಲ್ಲಿ 6 ಲಕ್ಷ ಜನ

Published:
Updated:

ತಿರುವನಂತಪುರ: ಪ್ರವಾಹಪೀಡಿತ ಕೇರಳದಲ್ಲಿ ಶನಿವಾರ ಸಂಜೆಯಿಂದ ಭಾನುವಾರ ಸಂಜೆಯವರೆಗೆ ಸುಮಾರು 3.2 ಲಕ್ಷ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ರಾಜ್ಯದ ಹಲವೆಡೆ ಆರಂಭಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಶನಿವಾರ ಸಂಜೆ ವೇಳೆಗೆ 3.14 ಲಕ್ಷ ಜನರು ಆಶ್ರಯ ಪಡೆದಿದ್ದರು. ಭಾನುವಾರ ಸಂಜೆಯ ವೇಳೆಗೆ ಆ ಜನರ ಸಂಖ್ಯೆ 6.33 ಲಕ್ಷದಷ್ಟಾಗಿದೆ.

ಎನ್‌ಡಿಆರ್‌ಎಫ್, ಐಟಿಬಿಪಿ, ಭಾರತೀಯ ಸೇನೆಯ ಮೂರೂ ಪಡೆಗಳು, ಕರಾವಳಿ ಕಾವಲು ಪಡೆ ಮತ್ತು ರಾಜ್ಯ ಅಗ್ನಿಶಾಮಕ ದಳ ಸಿಬ್ಬಂದಿ ಭಾನುವಾರ ಒಂದೇ ದಿನ 33 ಸಾವಿರ ಜನರನ್ನು ಸ್ಥಳಾಂತರಿಸಿದ್ದಾರೆ. ಉಳಿದ 2.9 ಲಕ್ಷ ಜನರಲ್ಲಿ ಬಹುತೇಕರನ್ನು ಸ್ವಯಂಸೇವಕರು, ಸ್ವಯಂಸೇವಾ ಸಂಸ್ಥೆಗಳು ಮತ್ತು ಮೀನುಗಾರರೇ ಪರಿಹಾರ ಕೇಂದ್ರಗಳಿಗೆ ತಲುಪಿಸಿದ್ದಾರೆ. ಸಾವಿರಾರು ಜನರು ತಾವೇ ಪರಿಹಾರ ಕೇಂದ್ರಗಳನ್ನು ತಲುಪಿದ್ದಾರೆ ಎಂದು ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.

* ಮುಖ್ಯಾಂಶಗಳು

* ದೇಶದ ವಿವಿಧೆಡೆಯಿಂದ ಕೇರಳಕ್ಕೆ ಬಂದ ಪರಿಹಾರ ಸಾಮಗ್ರಿಗಳು

* ಮಳೆ ಕಡಿಮೆಯಾಗಲಿದೆ; ಹವಾಮಾನ ಇಲಾಖೆ ಮುನ್ಸೂಚನೆ

* ಇವನ್ನೂ ಓದಿ...

ಕೇರಳದ ಹಾದಿಯಲ್ಲಿ ಗೋವಾ: ಮಾಧವ ಗಾಡ್ಗೀಳ್‌ ಎಚ್ಚರಿಕೆ

ಕೇರಳ ಪ್ರವಾಹ: ದೇಶದ ಆರ್ಥಿಕತೆಗೆ ಬಿದ್ದ ದೊಡ್ಡಪೆಟ್ಟು​

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !