ಕೇರಳ ಪ್ರವಾಹ: ಹಾನಿ ₹ 40,000 ಕೋಟಿ

7

ಕೇರಳ ಪ್ರವಾಹ: ಹಾನಿ ₹ 40,000 ಕೋಟಿ

Published:
Updated:

ತಿರುವನಂತಪುರ: ಕೇರಳದಲ್ಲಿ ಕಳೆದ ತಿಂಗಳು ಸಂಭವಿಸಿದ ಪ್ರವಾಹದಿಂದ ₹40,000 ಕೋಟಿ ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಕೈಗಾರಿಕಾ ಸಚಿವ ಇ.ಪಿ.ಜಯರಾಜನ್‌ ಬುಧವಾರ ಹೇಳಿದರು.

ಹಾನಿಯ  ಪ್ರಾಥಮಿಕ ಅಂದಾಜಿನ ಆಧಾರದಲ್ಲಿ ಪರಿಹಾರ ಒಗಿಸುವಂತೆ ಕೇಂದ್ರಕ್ಕೆ ಗುರುವಾರ ಮನವಿ ಸಲ್ಲಿಸಲಾಗುವುದು ಎಂದು ಸಚಿವ ಸಂಪುಟದ ಉಪ ಸಮಿತಿ ಸಭೆಯ ನಂತರ ಅವರು ಸುದ್ದಿಗಾರರಿಗೆ ತಿಳಿಸಿದರು.

ಮನೆಗಳು, ಸಾರ್ವಜನಿಕ ಆಸ್ತಿಪಾಸ್ತಿ, ಕೃಷಿ ಹಾಗೂ ಮೂಲಸೌಕರ್ಯಗಳ ಹಾನಿಯ ಬಗ್ಗೆ ಸಮೀಕ್ಷೆ ಮುಗಿದ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ. ಐದು ಲಕ್ಷ ಸಂತ್ರಸ್ತ ಕುಟುಂಬಗಳಿಗೆ ತಲಾ ₹10,000 ತಕ್ಷಣದ ಪರಿಹಾರ ನೀಡಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !