ಕೇರಳದಲ್ಲಿ 77.68% ಮತ ಚಲಾವಣೆ: ಕಣ್ಣೂರಿನಲ್ಲಿ ಗರಿಷ್ಠ 83.05% ಮತದಾನ

ಮಂಗಳವಾರ, ಮೇ 21, 2019
31 °C

ಕೇರಳದಲ್ಲಿ 77.68% ಮತ ಚಲಾವಣೆ: ಕಣ್ಣೂರಿನಲ್ಲಿ ಗರಿಷ್ಠ 83.05% ಮತದಾನ

Published:
Updated:

ತಿರುವನಂತಪುರಂ: ಏಪ್ರಿಲ್ 23ರಂದು ಕೇರಳದಲ್ಲಿ ನಡೆದ ಲೋಕಸಭಾ ಚುನಾವಣೆಯ ಮತದಾನದಲ್ಲಿ ಒಟ್ಟಾರೆ ಶೇ.77. 68 ಮತದಾನ ಆಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಕೇರಳದಲ್ಲಿ ಒಟ್ಟು 203,13,833 ಮತದಾರರು ಮತದಾನ ಚಲಾವಣೆ ಮಾಡಿದ್ದು 2014ರ ಲೋಕಸಭಾ ಚುನಾವಣೆಯ ಮತದಾನಕ್ಕಿಂತ ಹೆಚ್ಚು ಮತದಾನ ಆಗಿದೆ.

ಕೇರಳದ 20 ಲೋಕಸಭಾ ಕ್ಷೇತ್ರಗಳಿಗಾಗಿ ಏಪ್ರಿಲ್ 23 ಮಂಗಳವಾರ ಒಂದೇ ಹಂತದ ಚುನಾವಣೆ ನಡೆದಿದೆ.

ಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದಲ್ಲಿ  ಗರಿಷ್ಠ ಶೇ. 83.05 ಮತದಾನವಾಗಿದ್ದು, ತಿರುವನಂತಪುರಂನಲ್ಲಿ ಕನಿಷ್ಠ ಶೇ.73.45 ಮತದಾನವಾಗಿದೆ.

ತಿರುವನಂತಪುರಂನಲ್ಲಿ ಯುಡಿಎಫ್ ಅಭ್ಯರ್ಥಿ ಶಶಿ ತರೂರ್, ಎಲ್‌ಡಿಎಫ್ ಅಭ್ಯರ್ಥಿ ಸಿ.ದಿವಾಕರನ್ ಮತ್ತು ಎನ್‍ಡಿಎ ಅಭ್ಯರ್ಥಿ ಕುಮ್ಮನಂ ರಾಜಶೇಖರ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ.

ಇನ್ನುಳಿದಂತೆ ವಯನಾಡ್-80.31%, ಚಾಲಕ್ಕುಡಿ-80.44% , ಆಲಪ್ಪುಳ-80.09% ,ಅಲತ್ತೂರ್ - 80.33% ಕಾಸರಗೋಡು-80.57%  ಲೋಕಸಭಾ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಮತದಾನ ನಡೆದಿದೆ. 
ವಯನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಣಕ್ಕಿಳಿದಿರುವುದರಿಂದ ಈ ಲೋಕಸಭಾ ಕ್ಷೇತ್ರ ಹೆಚ್ಚಿನ ಗಮನ ಸೆಳೆದಿದೆ.

ವಡಕರ ಮತ್ತು ಕೋಝಿಕ್ಕೋಡ್ ಲೋಕಸಭಾ ಕ್ಷೇತ್ರಗಳಲ್ಲಿ ಕ್ರಮವಾಗಿ  82.48% ಮತ್ತು  81.47% ಮತದಾನವಾಗಿದೆ.
ಇತರ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಈ ರೀತಿ ಇದೆ. 
ಪಾಲಕ್ಕಾಡ್ -77.67%
ತ್ರಿಶ್ಶೂರ್ -77.86%
ಎರ್ನಾಕುಳಂ- 77.54%.  
ಇಡುಕ್ಕಿ- 76.01%
ಕೋಟ್ಟಯಂ - 75.29%
ಮಲಪ್ಪುರಂ - 75.43% 
ಆಟ್ಟಿಂಗಲ್ -74.23% 
ಕೊಲ್ಲಂ -74.36%
ಮಾವೇಲಿಕ್ಕರ - 74.09%
ಪತ್ತನಂತಿಟ್ಟ- 74.19%
ಪೊನ್ನಾನಿ -74.96%

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !