ಅಯ್ಯಪ್ಪ ಭಕ್ತರ ಬಗ್ಗೆ ಅವಹೇಳನಕಾರಿ ಪೋಸ್ಟ್: ರೆಹನಾ ಫಾತಿಮಾಗೆ ಜಾಮೀನು

7

ಅಯ್ಯಪ್ಪ ಭಕ್ತರ ಬಗ್ಗೆ ಅವಹೇಳನಕಾರಿ ಪೋಸ್ಟ್: ರೆಹನಾ ಫಾತಿಮಾಗೆ ಜಾಮೀನು

Published:
Updated:
Deccan Herald

ಕೊಚ್ಚಿ: ಸಾಮಾಜಿಕ ಮಾಧ್ಯಮದಲ್ಲಿ ಅಯ್ಯಪ್ಪ ಭಕ್ತರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ  ಬಂಧನಕ್ಕೊಳಗಾಗಿದ್ದ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಅವರಿಗೆ ಕೇರಳ ಹೈಕೋರ್ಟ್‌ ಶುಕ್ರವಾರ ಷರತ್ತು ಬದ್ಧ ಜಾಮೀನು ನೀಡಿದೆ.

ಮೂರು ತಿಂಗಳ ಕಾಲ ಪಂಪಾ ಪೊಲೀಸ್‌ ಠಾಣೆ ವ್ಯಾಪ್ತಿಗೆ ತೆರಳಬಾರದು ಮತ್ತು ಅನ್ಯಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ನ್ಯಾಯಾಲಯ ರೆಹನಾ ಅವರಿಗೆ ಷರತ್ತು ವಿಧಿಸಿದೆ.

39 ವರ್ಷದ ರೆಹನಾ ಅವರು ಅಕ್ಟೋಬರ್‌ನಲ್ಲಿ ಶಬರಿಮಲೆ ದೇಗುಲ ಸಂದರ್ಶಿಸಲು ಯತ್ನಿಸಿದ್ದರು. ಈ ವೇಳೆ ಭಕ್ತರು ಅವರನ್ನು ತಡೆದಿದ್ದರು.

 ಬಿಎಸ್‌ಎನ್‌ಎಲ್‌ ಉದ್ಯೋಗಿಯಾಗಿರುವ ರೆಹನಾ ವಿರುದ್ಧ ಪಟ್ಟಣಂತಿಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನವೆಂಬರ್‌ 27ರಂದು ಪೊಲೀಸರು ಅವರನ್ನು ಬಂಧಿಸಿದ್ದರು.

ಇದನ್ನೂ ಓದಿ... ರೆಹನಾ ಫಾತಿಮಾ ಅವರನ್ನು ವಜಾಗೊಳಿಸಿದ ಬಿಎಸ್‌ಎನ್‌ಎಲ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !