ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಗಡಿ ಬಂದ್ ಮಾಡಿರುವ ಪ್ರಕರಣ: ಕೇರಳ ಹೈಕೋರ್ಟ್ ಗರಂ

Last Updated 1 ಏಪ್ರಿಲ್ 2020, 10:45 IST
ಅಕ್ಷರ ಗಾತ್ರ

ಕೇರಳ: ಕರ್ನಾಟಕ ಹಾಗೂ ಕೇರಳ ಗಡಿ ಬಂದ್ ಮಾಡಿರುವ ಕರ್ನಾಟಕದ ಕ್ರಮ ಕುರಿತು ವಾದಆಲಿಸಿದ ಕೇರಳ ಹೈಕೋರ್ಟ್ ಸರ್ಕಾರಗಳ ಧೋರಣೆ ಕುರಿತು ಬೇಸರ ವ್ಯಕ್ತಪಡಿಸಿದ್ದು, ಕೇವಲ ಕೊರೊನಾ ರೋಗವನ್ನೇ ನೋಡುತ್ತಿದ್ದರೆ, ಇತರೆ ರೋಗಗಳಿಂದ ಜನರು ಮೃತಪಟ್ಟರೆ ಅದಕ್ಕೆ ಹೊಣೆಯಾರು ಎಂದು ಪ್ರಶ್ನಿಸಿದೆ.

ಈ ಸಂಬಂಧ ಸಂಜೆ 5.30ಕ್ಕೆಆದೇಶ ಹೊರಡಿಸುವುದಾಗಿ ಹೈಕೋರ್ಟ್ ತಿಳಿಸಿದೆ.ಕಾಸರಗೋಡಿನಲ್ಲಿ ಹಕ್ಕಿಜ್ವರ ಹಾಗೂ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿವೆ. ಕರ್ನಾಟಕದಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳ ಕರ್ನಾಟಕ ಗಡಿ ಭಾಗವನ್ನು ಬಂದ್ ಮಾಡಲಾಗಿದೆ.ಕಾಸರಗೋಡಿನಿಂದ ಬಂದ ಕೊರೊನಾ ಸೋಂಕಿತರನ್ನುದಾಖಲಿಸಿಕೊಳ್ಳಲು ಸಾಧ್ಯವಿಲ್ಲ. ಕೊಡಗು ಹಾಗೂ ಮಂಗಳೂರಿನಲ್ಲಿ ಕೊರೊನಾ ಸೋಂಕಿತರನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಅಡ್ವೊಕೇಟ್ ಜನರಲ್ ಕೇರಳ ಹೈಕೋರ್ಟ್‌‌ಗೆ ಅಫಿಡವಿಟ್ ಸಲ್ಲಿಸಿದೆ.

ಇಲ್ಲಿ ಕೇವಲ ಕೊರೊನಾ ಪೀಡಿತ ಪ್ರದೇಶಗಳ ನಡುವೆ ಸೋಂಕು ಹೆಚ್ಚಾಗಬಾರದು ಎಂದು ಬೇರ್ಪಡಿಸಿದ್ದೇವೆ ವಿನಃ ಬೇರಾವ ಕಾರಣಕ್ಕಾಗಿ ಅಲ್ಲ ಎಂದು ಕರ್ನಾಟಕತಿಳಿಸಿದೆ.ಇದನ್ನು ಪ್ರಶ್ನಿಸಿ ಕೇರಳ ಸರ್ಕಾರ ನ್ಯಾಯಾಲಯದ ಮೆಟ್ಟಿಲು ಏರಿದೆ. ಈ ಪ್ರಕರಣದ ವಿಚಾರಣೆ ನಡೆಸಿ ಎರಡೂ ಸರ್ಕಾರಗಳ ವಾದವನ್ನು ಕೇಳಿದ ಕೇರಳ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ.

ಈ ಸಂಬಂಧ ವೈದ್ಯರು ಕೇವಲ ಕೊರೊನಾ ಸೋಂಕಿತರನ್ನು ಮಾತ್ರ ತಪಾಸಣೆ ಮಾಡುತ್ತೇವೆ ಎನ್ನುತ್ತಿದ್ದರೆಇತರೆ ರೋಗಗಳಿಂದ ಸಾವು ಸಂಭವಿಸಿದರೆ ಯಾರು ಹೊಣೆ. ಈ ಸಂಬಂಧ ಸಂಜೆ ಆದೇಶ ಹೊರಡಿಸುವುದಾಗಿ ತಿಳಿಸಿ ವಾದವನ್ನು ಸಂಜೆ 5.30ಕ್ಕೆ
ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT