ಯುಎಇ ನೆರವು ಲಭಿಸುವ ಭರವಸೆ ಇದೆ: ಕೇರಳ ಸಿ.ಎಂ.ಪಿಣರಾಯಿ ವಿಜಯನ್‌

7

ಯುಎಇ ನೆರವು ಲಭಿಸುವ ಭರವಸೆ ಇದೆ: ಕೇರಳ ಸಿ.ಎಂ.ಪಿಣರಾಯಿ ವಿಜಯನ್‌

Published:
Updated:
Deccan Herald

ತಿರುವನಂತಪುರ: ಪ್ರವಾಹದಿಂದ ತತ್ತರಿಸಿರುವ ರಾಜ್ಯಕ್ಕೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಿಂದ (ಯುಎಇ) ನೆರವು ಲಭಿಸುವ ಭರವಸೆ ಇದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ಯುಎಇ ನೆರವನ್ನು ಕೇಂದ್ರ ಸರ್ಕಾರ ನಿರಾಕರಿಸಿರುವ ಕಾರಣ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಪ್ರವಾಹದ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಐಎಎಸ್‌ ಅಧಿಕಾರಿಗಳನ್ನು ಗೌರವಿಸಲು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪಿಣರಾಯಿ, ಹಲವು ರಾಷ್ಟ್ರಗಳು ಕೇರಳಕ್ಕೆ ನೆರವು ನೀಡಲು ಮುಂದೆ ಬಂದಿವೆ ಎಂದಿದ್ದಾರೆ.

ಯುಎಇ ₹700ಕೋಟಿ ನೆರವಿನ ಭರವಸೆ ನೀಡಿದೆ ಮತ್ತು ಕೇಂದ್ರ ಸರ್ಕಾರ ಅದನ್ನು ನಿರಾಕರಿಸಿದೆ ಎಂಬ  ವರದಿಯನ್ನು ಪ್ರಸ್ತಾಪಿಸಿದ ಅವರು, ವಿದೇಶಿ ನೆರವು ಬೇಡ ಎಂಬ ನಿಲುವನ್ನು ಕೇಂದ್ರ ಸರ್ಕಾರ ಸಡಿಲಿಸುವ ವಿಶ್ವಾಸವಿದೆ ಎಂದೂ ಹೇಳಿದ್ದಾರೆ.

ಪುನರ್‌ನಿರ್ಮಾಣ ಕಾರ್ಯಗಳಿಗೆ ವಿಶೇಷ ಪ್ಯಾಕೇಜ್‌ ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !