ಗುರುವಾರ , ನವೆಂಬರ್ 14, 2019
22 °C

ವಿಧಿಯನ್ನು ಅತ್ಯಾಚಾರಕ್ಕೆ ಹೋಲಿಕೆ: ಕಾಂಗ್ರೆಸ್‌ ಸಂಸದ ಪತ್ನಿ ವಿರುದ್ಧ ಆಕ್ರೋಶ

Published:
Updated:

ಕೊಚ್ಚಿ: ವಿಧಿ ಮತ್ತು ಅತ್ಯಾಚಾರ ನಡುವೆ ಸಾಮ್ಯತೆ ಕಲ್ಪಿಸಿ, ಕಾಂಗ್ರೆಸ್‌ನ ಸಂಸದ ಹಿಬಿ ಈಡನ್‌ ಪತ್ನಿ ಅನ್ನಾ ಲಿನಾ ಈಡನ್‌ ಅವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ಲೇಖನ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಜನರು ಆಕ್ರೋಶ–ಅಸಮಾಧಾನ ಹೊರಹಾಕುತ್ತಿದ್ದಂತೆಯೇ ಎಚ್ಚರಗೊಂಡ ಅನ್ನಾ, ತಮ್ಮ ಲೇಖನ ಹಾಗೂ ವಿಡಿಯೊಗಳನ್ನು ತೆಗೆದು ಹಾಕಿದ್ದಾರೆ.‘ನನ್ನ ತಂದೆ ಆರೋಗ್ಯ ಹದಗೆಟ್ಟಿದ್ದು, ಆ ದುಃಖವನ್ನು ಮರೆಯುವ ಉದ್ದೇಶದಿಂದ ಈ ರೀತಿ ಬರೆದಿದ್ದಾಗಿ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಏನಿದು ವಿವಾದ?: ‘ವಿಧಿ ಎಂಬುದು ಅತ್ಯಾಚಾರ ಇದ್ದಂತೆ. ಅದಕ್ಕೆ ಪ್ರತಿರೋಧ ಒಡ್ಡಲಾಗದಿದ್ದರೆ, ಅದನ್ನೇ ಸಂಭ್ರಮಿಸಬೇಕು’ ಎಂಬುದಾಗಿ ಅನ್ನಾ ಪೋಸ್ಟ್‌ ಹಾಕಿದ್ದರು.

ಮಳೆ ನೀರು ಮನೆಗೆ ನುಗ್ಗಿತ್ತು. ತೊಂದರೆಯಲ್ಲಿ ಸಿಲುಕಿದ್ದ ಮಗಳು ಹೊರಬರಲು ಯತ್ನಿಸುತ್ತಿದ್ದಳು. ಇನ್ನೊಂದೆಡೆ, ಪತಿ ಬಿಸಿಬಿಸಿ ತಿಂಡಿ ತಿನ್ನುತ್ತಿದ್ದರು. ಈ ಎರಡು ವಿಡಿಯೊಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಅವರು, ಪತಿ ಹಾಗೂ ಮಗಳು ಅನುಭವಿಸುತ್ತಿದ್ದ ಪರಿಸ್ಥಿತಿಯನ್ನು ವಿವರಿಸಲು ಈ ವಾಕ್ಯ ಬರೆದಿದ್ದಾಗಿ ಹೇಳಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)