ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ವಿರೋಧಿ ಹೋರಾಟದಲ್ಲಿ ಭಾಗಿ: ನಾಯಕನನ್ನು ಅಮಾನತು ಮಾಡಿದ ಕೇರಳ ಮುಸ್ಲಿಂ ಲೀಗ್

Last Updated 29 ಜನವರಿ 2020, 11:38 IST
ಅಕ್ಷರ ಗಾತ್ರ

ತಿರುವನಂತಪುರ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದಕ್ಕೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌)ತನ್ನ ನಾಯಕನನ್ನು ಅಮಾನತು ಮಾಡಿದೆ.

ಕೋಯಿಕ್ಕೋಡ್ ಜಿಲ್ಲೆಯ ಐಯುಎಂಎಲ್‌ನ ಬೇಪ್ಪೂರ್ ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಕೆ.ಎಂ. ಬಶೀರ್‌ ಅವರು ಅಮಾನತುಗೊಂಡ ನಾಯಕ.

ಗಣರಾಜ್ಯೋತ್ಸವದ ದಿನ ಕೇರಳದಾದ್ಯಂತ ಪಿಣರಾಯಿ ವಿಜಯನ್‌ನೇತೃತ್ವದ ಎಲ್‌ಡಿಎಫ್‌ ಸರ್ಕಾರ ಹಮ್ಮಿಕೊಂಡಿದ್ದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಬಶೀರ್ ಅವರು ಪಾಲ್ಗೊಂಡಿದ್ದರು. ಐಯುಎಂಎಲ್‌ ಇದರಿಂದ ದೂರ ಉಳಿಯಬೇಕು ಎಂದು ನಿರ್ಧರಿಸಿದ ನಂತರವೂ ಪ್ರತಿಭಟನೆಯಲ್ಲಿ ಭಾಗವಹಿಸಿದಕ್ಕೆ ಪಕ್ಷ ಬಶೀರ್‌ ವಿರುದ್ಧ ಈ ಶಿಸ್ತುಕ್ರಮಕೈಗೊಂಡಿದೆ.

‘ಸಿಎಎ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಯಾವುದೇ ಬೇಸರವಿಲ್ಲ ಮತ್ತು ಇನ್ನಷ್ಟು ಈ ರೀತಿಯ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತೇನೆ’ಎಂದು ಬಶೀರ್‌ ಹೇಳಿದ್ದಾರೆ.

ಐಯುಎಂಎಲ್‌ ಮಾಜಿ ನಾಯಕ, ಸಚಿವ ಕೆ.ಟಿ. ಜಲೀಲ್‌, ‘ಸಿಎಎ ವಿರೋಧಿ ಹೋರಾಟದಲ್ಲಿ ಸಾಕಷ್ಟು ಐಯುಎಂಎಲ್‌ ಕಾರ್ಯಕರ್ತರು ಭಾಗವಹಿಸಿದ್ದರು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT