ರಾಷ್ಟ್ರಪತಿಗಳಿಗೆ ಕೊಲೆ ಬೆದರಿಕೆ: ತ್ರಿಶೂರ್‌ ಅರ್ಚಕನ ಬಂಧನ

7

ರಾಷ್ಟ್ರಪತಿಗಳಿಗೆ ಕೊಲೆ ಬೆದರಿಕೆ: ತ್ರಿಶೂರ್‌ ಅರ್ಚಕನ ಬಂಧನ

Published:
Updated:

ತಿರುವನಂತಪುರ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ತ್ರಿಶೂರ್‌ನ ಚಿರಕ್ಕಲ್ ಭಗವತಿ ಕ್ಷೇತ್ರದ ಅರ್ಚಕ ಜಯರಾಮನ್‌ನನ್ನು ಬಂಧಿಸಲಾಗಿದೆ.

ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿಗಳು ಭಾನುವಾರ ತಿರುವನಂತಪುರಕ್ಕೆ ಆಗಮಿಸಿದ್ದಾರೆ. ರಾಜ್ಯ ವಿಧಾನಸಭೆಯ ವಜ್ರಮಹೋತ್ಸವದ ಅಂಗವಾಗಿ ಆಯೋಜಿಸಿರುವ ‘ಪ್ರಜಾಪ್ರಭುತ್ವ ಉತ್ಸವ’ವನ್ನು ಉದ್ಘಾಟಿಸಲಿರುವ ಅವರು, ಸೋಮವಾರ ತ್ರಿಶೂರಿನ ಸೈಂಟ್ ಥಾಮಸ್ ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
 

ಪೊಲೀಸ್‌ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿದ್ದ ಆರೋಪಿಯು ರಾಷ್ಟ್ರಪತಿಗಳಿಗೆ ಕೊಲೆ ಬೆದರಿಕೆಯೊಡ್ಡಿದ್ದಾನೆ. ಅಲ್ಲದೆ, ಸೈಂಟ್ ಥಾಮಸ್ ಕಾಲೇಜಿನ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ತಕ್ಷಣವೇ ದೂರವಾಣಿ ಕರೆ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯು ಮದ್ಯಪಾನದ ಅಮಲಿನಲ್ಲಿ ದೂರವಾಣಿ ಕರೆ ಮಾಡಿ ಬೆದರಿಕೆಯೊಡ್ಡಿದ್ದ ಎಂದು ತ್ರಿಶೂರ್ ಎಸ್‌ಪಿ ತಿಳಿಸಿರುವುದನ್ನು ನ್ಯೂಸ್‌18 ಜಾಲತಾಣ ವರದಿ ಮಾಡಿದೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 1

  Frustrated
 • 5

  Angry

Comments:

0 comments

Write the first review for this !