ಕೇರಳ: ಮಳೆ ಅಬ್ಬರಕ್ಕೆ 22 ಸಾವು; ಇಡುಕ್ಕಿ ಜಲಾಶಯ ವ್ಯಾಪ್ತಿ ‘ರೆಡ್‌ ಅಲರ್ಟ್’

7

ಕೇರಳ: ಮಳೆ ಅಬ್ಬರಕ್ಕೆ 22 ಸಾವು; ಇಡುಕ್ಕಿ ಜಲಾಶಯ ವ್ಯಾಪ್ತಿ ‘ರೆಡ್‌ ಅಲರ್ಟ್’

Published:
Updated:

ತಿರುವನಂತಪುರ: ಕೇರಳದಲ್ಲಿ ಮಳೆರಾಯನ ಆರ್ಭಟ ಹಾಗೂ ಭೂಕುಸಿತಕ್ಕೆ ಒಂದೇ ದಿನದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 22 ಮಂದಿ ಮೃತಪಟ್ಟಿದ್ದು, ಮೂವರು ಕಾಣೆಯಾಗಿದ್ದಾರೆ. ನದಿಗಳು ಮೈದುಂಬಿ ಹರಿಯುತ್ತಿವೆ. ನದಿ ತೀರದ ಮನೆಗಳು ಹಾಗೂ ಗ್ರಾಮಗಳಿಗೆ ನೀರು ನುಗ್ಗಿದ್ದು, ಮನೆಗಳು ಜಲಾವೃತವಾಗಿವೆ. 

ಇಡುಕ್ಕಿಯಲ್ಲಿ ಸಂಭವಿಸಿದ ಭೂಕುಸಿತಕ್ಕೆ 10 ಮಂದಿ, ಮಲ್ಲಪುರಂನಲ್ಲಿ 5 ಮಂದಿ, ಕಣ್ಣೂರಿನಲ್ಲಿ 2 ಮಂದಿ, ವಯನಾಡಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. 

ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. 

ವಿಶ್ವದ ಎರಡನೇ ಕಮಾನು ಆಕಾರದ ಇಡುಕ್ಕಿ ಅಣೆಕಟ್ಟಿನ ಗೇಟುಗಳನ್ನು 26 ವರ್ಷದ ಬಳಿಕ ಪ್ರಾಯೋಗಿಕವಾಗಿ ತೆರೆಯಲಾಗಿದೆ. ಇದರ ಗರಿಷ್ಟ ಮಟ್ಟ 2403 ಅಡಿ. ಈಗಾಗಲೇ ಬೆಳಿಗ್ಗೆವ ವರದಿಯಂತೆ 2398.80 ಅಡಿ ತಲುಪಿದೆ. ಹಾಗಾಗಿ ಇದರ ಸುತ್ತಮುತ್ತಲಿನ ಜನರಿಗೆ ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ತಿಳಿಸಲಾಗಿದೆ. 

ರೆಡ್‌ ಅಲರ್ಟ್; ನಾಳೆ ಇಡುಕ್ಕಿಯಿಂದ ನೀರು ಹೊರಕ್ಕೆ

ಕೇರಳ ವಿದ್ಯುತ್‌ ನಿಗಮ ಇಡುಕ್ಕಿ ಜಲಾಶಯ ವ್ಯಾಪ್ತಿಯಲ್ಲಿ ತೀವ್ರ ಎಚ್ಚರಿಕೆ(ರೆಡ್‌ ಅಲರ್ಟ್‌) ನೀಡಿದೆ. ಇಡುಕ್ಕಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಶುಕ್ರವಾರ ಬೆಳಿಗ್ಗೆ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಿದೆ. ಇಂದು ಸಂಜೆ 4 ಗಂಟೆಗೆ ಜಲಾಶಯದ ನೀರಿನ ಮಟ್ಟ 2399.56 ಅಡಿ ಇದೆ. ಆದ್ದರಿಂದ ಎಚ್ಚರಿಕೆ ನೀಡಲಾಗಿದೆ.

100 ಮನೆಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗುತ್ತಿದೆ. 191 ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಎರ್ನಾಕುಲಂನ ಎರಡು ಕಡೆ ಪುನರ್ವಸತಿ ಕೇಂದ್ರ ಸೇರಿದಂತೆ ಒಟ್ಟು 10 ಕಡೆ ತಾತ್ಕಾಲಿಕ ಶಿಬಿರಗಳನ್ನು ತೆರೆಯಲಾಗಿದೆ. ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ರಕ್ಷಣಾ ಪಡೆ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. 

ಜನರ ರಕ್ಷಣೆಗಾಗಿ ರಾಷ್ಟ್ರೀಯ ವಿಪತ್ತು ಪಡೆ(ಎನ್‌ಡಿಆರ್‌ಎಫ್), ಭಾರತೀಯ ಸೇನೆ, ನೌಕಾ ಸೇನೆ ಸ್ಥಳಕ್ಕೆ ಕಳುಹಿಸಲಾಗಿದೆ. ವಯನಾಡು, ಕೊಜಿಕೋಡ್, ಅಲಪುಜಾದಲ್ಲಿ ಮೂರು ಎನ್‌ಡಿಆರ್‌ಎಫ್ ಪಡೆ ಬೀಡು ಬಿಟ್ಟಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಮಲ್ಲಪುರಂ ಬಳಿ ರಸ್ತೆಯೊಂದು ಪ್ರವಾಹದ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದೆ. ವಿಡಿಯೊ: ಎಎನ್‌ಐ ಟ್ವಿಟ್‌

Heavy rains are causing destruction in many parts of the State. Debris flows and soil erosions have occurred in Wayanad, Idukki & Malappuram districts.

ಕೊಯಿಕೋಡ್, ವಯನಾಡು, ಪಲಕಾಡ್, ಇಡುಕ್ಕಿಯ ಕೆಲವು ಪ್ರದೇಶಗಳು, ಮಲ್ಲಪುರಂ, ಕೊಲ್ಲಂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

 

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !