ಕೇರಳ: ಲಿಂಗಪರಿವರ್ತಿತರಿಗೆ ವಿ.ವಿಗಳಲ್ಲಿ ಮೀಸಲಾತಿ

7

ಕೇರಳ: ಲಿಂಗಪರಿವರ್ತಿತರಿಗೆ ವಿ.ವಿಗಳಲ್ಲಿ ಮೀಸಲಾತಿ

Published:
Updated:

ತಿರುವನಂತಪುರ: ಲಿಂಗಪರಿವರ್ತಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಉತ್ತಮ ಅವಕಾಶ ದೊರಕಿಸಿಕೊಡುವ ಉದ್ದೇಶದಿಂದ, ರಾಜ್ಯದ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಮೀಸಲಾತಿ ನೀಡಲು ಕೇರಳ ಸರ್ಕಾರ ಮುಂದಾಗಿದೆ.

ವಿಶ್ವವಿದ್ಯಾಲಯಗಳಲ್ಲಿ ಹಾಗೂ ಕಲೆ ಮತ್ತು ವಿಜ್ಞಾನ ಕಾಲೇಜುಗಳಲ್ಲಿನ ಎಲ್ಲಾ ಕೋರ್ಸ್‌ಗಳಲ್ಲಿ ಇವರಿಗೆಂದೇ ಎರಡು ಸೀಟುಗಳನ್ನು ಕಾಯ್ದಿರಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.

‘ಸಮಾಜದ ಅಂಚಿನಲ್ಲಿರುವ ಈ ವರ್ಗದ ಜನರನ್ನು ಮುನ್ನೆಲೆಗೆ ತರುವುದು ಇದರ ಉದ್ದೇಶ. ಸಾಮಾಜಿಕ ನ್ಯಾಯ ಇಲಾಖೆಯ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಇಲಾಖೆ ಹೇಳಿದೆ.

‘ಸಾಮಾಜಿಕ ಸಮಸ್ಯೆಗಳಿಂದ ಲಿಂಗಪರಿವರ್ತಿತ ವಿದ್ಯಾರ್ಥಿಗಳು ಶಿಕ್ಷಣಅರ್ಧಕ್ಕೆ ಮೊಟಕುಗೊಳಿಸುತ್ತಾರೆ ಅಥವಾ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಇತರ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗಲು ಯತ್ನಿಸುತ್ತಾರೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

**

ಮಾಸಿಕ ಆದಾಯ ₹1 ಸಾವಿರಕ್ಕಿಂತ ಕಡಿಮೆ!

ಲಿಂಗಪರಿವರ್ತಿತ ಸಮುದಾಯದ ಶೇ 50ರಷ್ಟು ಜನ ಮಾಸಿಕ ₹1 ಸಾವಿರ ಅಥವಾ ಅದಕ್ಕಿಂತ ಕಡಿಮೆ ಆದಾಯದಲ್ಲಿ ಜೀವಿಸುತ್ತಿದ್ದಾರೆ ಎಂದು ಸಾಕ್ಷರತಾ ಸಮಿತಿ ಈಚೆಗೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಶೇ 28.53 ಜನ ₹1 ಸಾವಿರದಿಂದ ₹5 ಸಾವಿರದವರೆಗೆ, ಶೇ 19.46 ಜನ ₹5 ಸಾವಿರದಿಂದ ₹10 ಸಾವಿರದವರೆಗೆ ಆದಾಯ ಹೊಂದಿದ್ದಾರೆ.

ಶೇ 20.35 ಮಂದಿ ನಿರುದ್ಯೋಗಿಗಳಾಗಿದ್ದಾರೆ. ಶೇ 30ರಷ್ಟು ಜನ ಸ್ವಯಂ ಉದ್ಯೋಗ ಹೊಂದಿದ್ದಾರೆ ಎಂದು ಸಮೀಕ್ಷೆ ಹೇಳಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !