ಶನಿವಾರ, ಜುಲೈ 24, 2021
26 °C
ಕೇರಳ: ದೇಣಿಗೆಯಾಗಿ ದೊರೆಯಿತು ಒಂದು ಲಕ್ಷ ಟಿವಿ, ಮೊಬೈಲ್‌

ಬುಡಕಟ್ಟು ಪ್ರದೇಶಗಳಲ್ಲೂ ಇ–ತರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಇಡುಕ್ಕಿ ಜಿಲ್ಲೆಯಲ್ಲಿರುವ ದಟ್ಟಾರಣ್ಯದಲ್ಲಿ 15 ಕಿ.ಮೀ. ಒಳಗಿರುವ ಎಡಮಲಕ್ಕುಡಿ ಬುಡಕಟ್ಟು ಪ್ರದೇಶದ ವಿದ್ಯಾರ್ಥಿಗಳೂ ಇದೀಗ ಆನ್‌ಲೈನ್‌ ತರಗತಿಗಳಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ.   

ಒಂದನೇ ತರಗತಿಯಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವ ಕೇರಳದ ಮಹತ್ವಾಕಾಂಕ್ಷಿ ಯೋಜನೆ ‘ಫಸ್ಟ್‌ಬೆಲ್‌’ ಪ್ರಾಯೋಗಿಕ ಹಂತವನ್ನು ಪೂರ್ಣಗೊಳಿಸಿದೆ. ‘ಫಸ್ಟ್‌ಬೆಲ್‌’ನಲ್ಲಿ ಶೈಕ್ಷಣಿಕ ವರ್ಷದ ಮೊದಲ ತರಗತಿ
ಸೋಮವಾರದಿಂದ ಆರಂಭವಾಗಲಿದೆ. ರಾಜ್ಯದಾದ್ಯಂತ 41 ಲಕ್ಷ ವಿದ್ಯಾರ್ಥಿಗಳು ತಮ್ಮ ಮನೆಯಲ್ಲೇ ಅಥವಾ ಸಮುದಾಯ ಶೈಕ್ಷಣಿಕ ಕೇಂದ್ರಗಳಲ್ಲಿ ಕುಳಿತು ಆನ್‌ಲೈನ್‌ ತರಗತಿಗಳಲ್ಲಿ ಭಾಗವಹಿಸಲಿದ್ದಾರೆ. 

ವಿದ್ಯಾರ್ಥಿನಿ ಆತ್ಮಹತ್ಯೆ ಪರಿಣಾಮ: ‘ಫಸ್ಟ್‌ಬೆಲ್‌’ ಆನ್‌ಲೈನ್‌ ತರಗತಿಗೆ ಹಾಜರಾಗಲು  ಸ್ಮಾರ್ಟ್‌ಫೋನ್‌, ಟಿವಿ ಲಭ್ಯವಿಲ್ಲ ಎಂಬ ಕಾರಣಕ್ಕೆ ಮಲಪ್ಪುರಂ ಜಿಲ್ಲೆಯ ದಲಿತ ಕುಟುಂಬದ 9 ನೇತರಗತಿಯ ವಿದ್ಯಾರ್ಥಿನಿ ದೇವಿಕಾ ಜೂನ್‌ 1ರಂದು ಆತ್ಮಹತ್ಯೆ ಮಾಡಿ
ಕೊಂಡಿದ್ದಳು. ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯದಲ್ಲಿ 2.26 ಲಕ್ಷ ವಿದ್ಯಾರ್ಥಿಗಳ ಬಳಿ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲು ಬೇಕಾದ ಅಗತ್ಯ ಮೂಲಸೌಕರ್ಯಗಳಿಲ್ಲ ಎನ್ನುವುದು ಬಹಿರಂಗವಾಗಿತ್ತು. 

ಒಂದು ಲಕ್ಷ ಟಿವಿ, ಸ್ಮಾರ್ಟ್‌ಫೋನ್‌ ದೇಣಿಗೆ: ವಿದ್ಯಾರ್ಥಿನಿ ಆತ್ಮಹತ್ಯೆ ಬೆನ್ನಲ್ಲೇ ಸೌಲಭ್ಯವಂಚಿತ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಸಂಪರ್ಕ ಹಾಗೂಅವುಗಳಿಗೆ ಅಗತ್ಯವಿರುವ ಉಪಕರಣಗಳನ್ನು ಒದಗಿಸುವ ಹಲವು ಅಭಿಯಾನಗಳು ನಡೆದವು. ‘ಖಾಸಗಿ ಸಂಸ್ಥೆಗಳು, ಎನ್‌ಜಿಒಗಳು, ಜನರು ಒಂದು ಲಕ್ಷಕ್ಕೂ ಅಧಿಕ ಟಿವಿ, ಸ್ಮಾರ್ಟ್‌ಫೋನ್‌ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಇವುಗಳನ್ನು ಎಡಮಲಕ್ಕುಡಿಯಂಥ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆನ್‌ಲೈನ್‌ ತರಗತಿ ವ್ಯವಸ್ಥೆಗೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಕೇರಳ ಶಿಕ್ಷಣ  ಮೂಲಸೌಕರ್ಯ ಮತ್ತು ತಂತ್ರಜ್ಞಾನ(ಕೈಟ್‌) ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಅನ್ವರ್‌ ಸದಾತ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು