ನಿಷೇಧಿತ ಉಗ್ರ ಸಂಘಟನೆ ಸದಸ್ಯನ ಬಂಧನ

ಶನಿವಾರ, ಮಾರ್ಚ್ 23, 2019
24 °C

ನಿಷೇಧಿತ ಉಗ್ರ ಸಂಘಟನೆ ಸದಸ್ಯನ ಬಂಧನ

Published:
Updated:

ನವದೆಹಲಿ: ನಿಷೇಧಿತ ಭಯೋತ್ಪಾದಕ ಸಂಘಟನೆ ಖಲಿಸ್ತಾನ ಕಮಾಂಡೊ ಫೋರ್ಸ್ (ಕೆಸಿಎಫ್) ಸದಸ್ಯ ಗುರುಸೇವಕ್ ಸಿಂಗ್‌ನನ್ನು (53) ಬಂಧಿಸಲಾಗಿದೆ.

ಪಾಕಿಸ್ತಾನದಲ್ಲಿ ಇರುವ ಕೆಸಿಎಫ್ ಮುಖ್ಯಸ್ಥ ಪರಮ್‌ಜೀತ್ ಸಿಂಗ್ ಪಂಜ್ವಾಡ್ ಸೂಚನೆ ಮೇರೆಗೆ ಸಂಘಟನೆಯ ಚಟುವಟಿಕೆಗಳನ್ನು ಪುನಃ ಆರಂಭಿಸಲು ಗುರುಸೇವಕ್ ಮುಂದಾಗಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.  

1984ರಲ್ಲಿ ಸೇನೆ ನಡೆಸಿದ್ದ ‘ಆಪರೇಷನ್ ಬ್ಲೂ ಸ್ಟಾರ್’ನಲ್ಲಿ ಹತ್ಯೆಯಾದ ಜರನೈಲ್ ಸಿಂಗ್ ಭಿಂಡರವಾಲೆ ಜತೆ ಈತ ಗುರುತಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. 

‘ಭಯೋತ್ಪಾದಕ ಚಟುವಟಿಕೆ, ಪೊಲೀಸ್ ಅಧಿಕಾರಿಗಳು ಹಾಗೂ ಮಾಹಿತಿದಾರರ ಹತ್ಯೆ, ಬ್ಯಾಂಕ್‌ಗಳು ಹಾಗೂ ಪೊಲೀಸ್ ಠಾಣೆಗಳ ಲೂಟಿ ಸೇರಿದಂತೆ 50ಕ್ಕೂ ವಿವಿಧ ಪ್ರಕರಣಗಳಲ್ಲಿ ಈತ 26 ವರ್ಷಗಳಿಗೂ ಹೆಚ್ಚು ಕಾಲ ಶಿಕ್ಷೆ ಅನುಭವಿಸಿದ್ದಾನೆ. ಈ ವೇಳೆ ಆತ ಪಾಕಿಸ್ತಾನ ಮೂಲದ ಕೆಲವು ಭಯೋತ್ಪಾದಕರ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದ’ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಅಜಿತ್ ಕುಮಾರ್ ಸಿಂಗ್ಲಾ
ತಿಳಿಸಿದ್ದಾರೆ. 

‘ಶಿಕ್ಷೆಯ ಬಹುಪಾಲು ಅವಧಿಯನ್ನು ತಿಹಾರ್ ಜೈಲಿನಲ್ಲಿ ಕಳೆದಿರುವ ಈತ, ಆ ಸಂದರ್ಭದಲ್ಲಿ ದೆಹಲಿಯಲ್ಲಿ ದಾಳಿ ನಡೆಸಲು ಪಾಕಿಸ್ತಾನದಿಂದ ಎ.ಕೆ. 47 ಬಂದೂಕುಗಳು ಸೇರಿದಂತೆ ಸ್ಫೋಟಕಗಳನ್ನು ಆಮದು ಮಾಡಿಕೊಳ್ಳಲು ಯತ್ನಿಸಿದ್ದ. ಆದರೆ ದೆಹಲಿ ಅಪರಾಧ ದಳದ ಪೊಲೀಸರು ಈ ಯತ್ನ ವಿಫಲಗೊಳಿಸಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ 2017ರಲ್ಲಿ ದೆಹಲಿ ಪೊಲೀಸರು ಈತನನ್ನು ಬಂಧಿಸಿದ್ದರು. ಪ್ರಕರಣ ಸಂಬಂಧ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಈತ ನಿರಂತರವಾಗಿ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿತ್ತು.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !