ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಣ್‌ ಮಜುಂದಾರ್‌ ಶಾಗೆ ಆಸ್ಟ್ರೇಲಿಯಾ ಅತ್ಯುನ್ನತ ನಾಗರಿಕ ಗೌರವ

Last Updated 18 ಜನವರಿ 2020, 21:31 IST
ಅಕ್ಷರ ಗಾತ್ರ

ನವದೆಹಲಿ: ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ ಅವರು ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾಗಿದ್ದಾರೆ.

ಭಾರತದ ಜೊತೆಗಿನ ಸಂಬಂಧವನ್ನು ಮುನ್ನಡೆಸುವಲ್ಲಿ ನೀಡಿದ ಕೊಡುಗೆಗಾಗಿ ಆಸ್ಟ್ರೇಲಿಯಾ ತನ್ನ ಅತ್ಯುನ್ನತ ನಾಗರಿಕ ಗವರವವಾದ ‘ಆರ್ಡ್‌ರ್‌ ಆಫ್‌ ಆಸ್ಟ್ರೇಲಿಯಾ’ ಗೌರವ ನೀಡಿದೆ.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಭಾರತದ ಹೈಕಮಿಷನರ್‌ ಹರಿಂದರ್‌ ಸಿಧು ಅವರು ಈ ಗೌರವದೊಂದಿಗೆ ಶಾ ಅವರನ್ನು ಗೌರವಾನ್ವಿತ ಸದಸ್ಯರನ್ನಾಗಿ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಶಾ ಅವರು ಆಸ್ಟ್ರೇಲಿಯಾದ ಫೆಡರೇಶನ್‌ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯಾದ್ದಾರೆ. ಆಸ್ಟ್ರೇಲಿಯಾದ ಹಳೆಯ ವಿದ್ಯಾರ್ಥಿಗಳ ಜಾಗತಿಕ ರಾಯಭಾರಿಯಾಗಿರುವ ಅವರು, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಉದ್ಯಮ, ಶೈಕ್ಷಣಿಕ ಸಹಯೋಗಕ್ಕೆ ನಿರಂತರ ಮತ್ತು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT