ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ಸಾಮರಸ್ಯ ಭಾರತೀಯರ ರಕ್ತದಲ್ಲಿದೆ: ಕಿರಣ್‌ ರಿಜಿಜು

Last Updated 11 ಜೂನ್ 2020, 12:53 IST
ಅಕ್ಷರ ಗಾತ್ರ

ನವದೆಹಲಿ: ಕೋಮು ಸಾಮರಸ್ಯ ಹಾಗೂ ಸಹಿಷ್ಣುತೆ ಈ ದೇಶದ ವಂಶವಾಹಿನಿಯಲ್ಲಿಯೇ ಅಡಕವಾಗಿದ್ದು, ಇದಕ್ಕಾಗಿ ಯಾರಿಂದಲೂ ಪ್ರಮಾಣ ಪತ್ರ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಕಿರಣ್‌ ರಿಜಿಜು ಗುರುವಾರ ತಿಳಿಸಿದ್ದಾರೆ.

‘ಅಲ್ಪಸಂಖ್ಯಾತರ ಸಾಂವಿಧಾನಿಕ, ಸಾಮಾಜಿಕ ಹಾಗೂ ಧಾರ್ಮಿಕ ಹಕ್ಕುಗಳು ಸುರಕ್ಷಿತವಾಗಿವೆ. ರಾಜಕೀಯ ಕಾರಣಕ್ಕಾಗಿ ಕೆಲವರು ಭಯ ಹಾಗೂ ಅಸಹಿಷ್ಣುತೆಯ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಲು ಹೊರಟಿದ್ದಾರೆ. ಅಲ್ಪಸಂಖ್ಯಾತರಿಗೆ ಭಾರತದಷ್ಟು ಸುರಕ್ಷಿತ ದೇಶ ಮತ್ತೊಂದಿಲ್ಲ ಎಂದುಅಲ್ಪಸಂಖ್ಯಾತ ಸಮುದಾಯದವನಾಗಿ ಹೇಳಬಲ್ಲೆ’ ಎಂದಿದ್ದಾರೆ.

ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಅಮೆರಿಕದ ರಾಯಭಾರಿ ಸ್ಯಾಮುಯೆಲ್‌ ಬ್ರೌನ್‌ಬ್ಯಾಕ್‌, ‘ನಾಲ್ಕು ಧರ್ಮಗಳ ಹುಟ್ಟಿಗೆ ಕಾರಣವಾದ ದೇಶ ಭಾರತ. ಆದರೆ, ಧಾರ್ಮಿಕ ಸ್ವಾತಂತ್ರ್ಯದ ದೃಷ್ಟಿಯಿಂದ ಇಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕಳವಳಕ್ಕೀಡು ಮಾಡುತ್ತಿವೆ’ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಸಚಿವ ರಿಜಿಜು ಈ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT