ಭಾನುವಾರ, ಏಪ್ರಿಲ್ 5, 2020
19 °C

ಲಡಾಕ್‌: ಕೋವಿಡ್‌–19 ಪೀಡಿತರ ಸಂಖ್ಯೆ 6ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾದ ಲಡಾಕ್‌ನಲ್ಲಿ ಮಂಗಳವಾರ ಮತ್ತೆ ಮೂವರಿಗೆ ಕೋವಿಡ್‌–19 ಇರುವುದು ದೃಢಪಟ್ಟಿದ್ದು, ಕೋವಿಡ್‌ ಪೀಡಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

ಎಂ.ಎಸ್‌.ಸೋನಾಂ ನೊರ್ಬೂ ಸ್ಮಾರಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೂವರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಈ ಮೂವರು ಯಾವುದೇ ಪ್ರಯಾಣ ಮಾಡಿಲ್ಲ. ಆದರೆ ಅವರ ಪೋಷಕರು ಇರಾನ್‌ನಿಂದ ಹಿಂತಿರುಗಿದ್ದರು ಎಂದು ಲಡಾಕ್‌ ಕೇಂದ್ರಾಡಳಿತ ಪ್ರದೇಶದ ವಕ್ತಾರ ರಿಗ್‌ಜಿನ್‌ ಸಂಫೇಲ್‌ ತಿಳಿಸಿದ್ದಾರೆ.

ಈಗಾಗಲೇ ಲಡಾಕ್‌ನ ಲೇಹ್‌ನಲ್ಲಿ ಇಬ್ಬರು ಹಾಗೂ ಕಾರ್ಗಿಲ್‌ ಜಿಲ್ಲೆಯಲ್ಲಿ ಒಬ್ಬರಿಗೆ ಕೋವಿಡ್‌–19 ಇರುವುದು ದೃಢಪಟ್ಟಿದ್ದು, ಈಗ ಲೇಹ್‌ನಲ್ಲಿ ಇಬ್ಬರು, ಕಾರ್ಗಿಲ್‌ ಜಿಲ್ಲೆಯ ಒಬ್ಬರಲ್ಲಿ ಕೋವಿಡ್‌–19 ಇರುವುದು ಕಂಡುಬಂದಿದೆ. ಕಾರ್ಗಿಲ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು