ವೈರಲ್ ವಿಡಿಯೊ: ಆನೆಯಿಂದ ಕೆಳಗುರುಳಿದ ಅಸ್ಸಾಂ ಉಪಸಭಾಧ್ಯಕ್ಷ

7

ವೈರಲ್ ವಿಡಿಯೊ: ಆನೆಯಿಂದ ಕೆಳಗುರುಳಿದ ಅಸ್ಸಾಂ ಉಪಸಭಾಧ್ಯಕ್ಷ

Published:
Updated:

ಬೆಂಗಳೂರು: ಅಸ್ಸಾಂ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಈಚೆಗಷ್ಟೇ ಆಯ್ಕೆಯಾಗಿದ್ದ ಕೃಪಾನಾಥ ಮಲ್ಲಾ ಆನೆಯೊಂದರಿಂದ ಕೆಳಗೆ ಬೀಳುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿರುವ ಸ್ವಕ್ಷೇತ್ರ ರತಬರಿಯಲ್ಲಿ ತಮ್ಮ ನೆಚ್ಚಿನ ನಾಯಕನನ್ನು ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಲು ಯತ್ನಿಸಿದ ಅಭಿಮಾನಿಗಳ ಆಸೆ ಆನೆಗೆ ಅರ್ಥವಾಗದೆ ಈ ಅನರ್ಥ ಸಂಭವಿಸಿದೆ. ಆನೆಯಿಂದ ಕೆಳಗೆ ಬಿದ್ದರೂ ಕೃಪಾನಾಥ ಅವರಿಗೆ ಹೆಚ್ಚೇನೂ ಗಾಯಗಳಾಗಿಲ್ಲ.

ಕೈಲಿ ಕಮಲದ ಚಿಹ್ನೆಯಿದ್ದ ಪಕ್ಷದ ಬಾವುಟ ಹಿಡಿದು ಬೀಗುತ್ತಾ ಕುಳಿತಿದ್ದ ನಾಯಕನ ಜೊತೆಗೆ ಮಾವುತನನ್ನೂ ಕೆಡವಿದ ಆನೆ ಮಾತ್ರ ಹಿಂದಕ್ಕೆ ತಿರುಗಿ ನೋಡದೆ ಓಡಿಹೋಗಿದೆ. ಕೃಪಾನಾಥನನ್ನು ಪಕ್ಷದ ಕಾರ್ಯಕರ್ತರ ಕೈಗೊಪ್ಪಿಸಿದ ಮಾವುತ ಆನೆಯ ಹಿಂದೆ ಓಡಿದ್ದಾನೆ. ರಸ್ತೆ ಬದಿಯ ಹುಲ್ಲಿನ ಮೇಲೆ ಬಿದ್ದ ಕಾರಣ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಯುಟ್ಯೂಬ್, ಟ್ವಿಟರ್‌, ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಈ ವಿಡಿಯೊ ವ್ಯಾಪಕವಾಗಿ ಶೇರ್ ಆಗಿದೆ. ‘ನಮ್ಮ ನಾಯಕರು ಜೋಕರ್‌ಗಳಂತೆ ಕಾಲಹರಣ ಮಾಡುವುದನ್ನು ನಿಲ್ಲಿಸಿ ಆಗಬೇಕಾಗಿರುವ ಕೆಲಸಗಳತ್ತ ಗಮನ ಕೊಡಲಿ’ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 21

  Happy
 • 5

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !