ಪ್ರವಾಹದಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕಾಗಿ ಜಮೀನು ನೀಡಿದ ಪಾದ್ರಿ

7

ಪ್ರವಾಹದಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕಾಗಿ ಜಮೀನು ನೀಡಿದ ಪಾದ್ರಿ

Published:
Updated:

ಅಡೂರ್: ಕೇರಳದ ಪ್ರವಾಹದಲ್ಲಿ ಮೃತ ಪಟ್ಟವರ ಅಂತ್ಯ ಸಂಸ್ಕಾರಕ್ಕೆ ಜಾಗ ಇಲ್ಲದೇ ಇದ್ದರೆ ಅದಕ್ಕಾಗಿ ನಾನು ಜಮೀನು ನೀಡುತ್ತೇನೆ ಎಂದು ಪತ್ತನಂತಿಟ್ಟ ಅಡೂರ್ ನಲ್ಲಿರುವ ಕುರುವಿಳಾ ಸ್ಯಾಮುವೆಲ್ ಎಂಬವರು ಹೇಳಿದ್ದಾರೆ.

ಅಡೂರ್ ನಲ್ಲಿರುವ ತಮ್ಮ ಜಮೀನಿನಲ್ಲಿ ಜಾತಿ ಮತ ಬೇಧವಿಲ್ಲದೆ ಮೃತದೇಹಗಳ ಅಂತ್ಯ ಸಂಸ್ಕಾರ ಮಾಡಬಹುದು. ಈ ಜಮೀನಿನಲ್ಲಿ ನೀರು ತುಂಬಿಕೊಳ್ಳುವುದಿಲ್ಲ. ಅಲ್ಲಿಗೆ ಹೋಗುವ ರಸ್ತೆಯೂ ಸುರಕ್ಷಿತವಾಗಿದೆ ಎಂದು ಕುರುವಿಳಾ ಫೇಸ್‍ಬುಕ್ ಲೈವ್ ವಿಡಿಯೊದಲ್ಲಿ ಹೇಳಿದ್ದಾರೆ.

ಅಡೂರ್ ನಗರದಿಂದ ಮೂರು ಕಿಮೀ ದೂರದಲ್ಲಿರುವ  ಪನ್ನಿವಿಳ ಪುತ್ತನ್ ಚಂದ ಸಮೀಪದಲ್ಲಿರುವ 25 ಸೆಂಟ್ಸ್ ಜಮೀನನ್ನು ಇವರು ಅಂತ್ಯ ಸಂಸ್ಕಾರಕ್ಕಾಗಿ ನೀಡಿದ್ದಾರೆ.  ದೆಹಲಿಯಲ್ಲಿ ವಾಸಿಸುತ್ತಿರುವ ಇವರು ಪಾದ್ರಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !