ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ರಂದು ಕುಪ್ಪಳಿಯಲ್ಲಿ ಚಿಂತನ-ಮಂಥನ ಶಿಬಿರ

Last Updated 13 ನವೆಂಬರ್ 2019, 20:58 IST
ಅಕ್ಷರ ಗಾತ್ರ

ಕುಪ್ಪಳಿಯಲ್ಲಿ ನ. 16ರಂದು ಲೋಹಿಯಾ ಜನ್ಮ ಶತಾಬ್ದಿ ಪ್ರತಿಷ್ಠಾನ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ‘ಪರ್ಯಾಯ ಅಭಿವೃದ್ಧಿ ಮಾದರಿ; ಒಂದು ಚಿಂತನ-ಮಂಥನ’ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಶಿಬಿರದ ನಿರ್ದೇಶಕ ಡಿ.ಎಸ್. ನಾಗಭೂಷಣ್ ಹಾಗೂ ಸಂಚಾಲಕ ಹೊನ್ನಾಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 10ಕ್ಕೆ ಚಿಂತಕ ಡಾ.ಬಿ.ಎ.ವಿವೇಕ ರೈ ಶಿಬಿರವನ್ನು ಉದ್ಘಾಟಿಸುವರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಪಾಲ್ಗೊಳ್ಳಲಿರುವರು.

ಕೇಶವ ಎಚ್.ಕೊರ್ಸೆ ಸಿರ್ಸಿ, ಸಂತೋಷ್ ಕೌಜಲಗಿ, ಮೇಲುಕೋಟೆ, ಭಾರತಿ ಹೆಗಡೆ, ಶಿವಾನಂದ ಕಳವೆ, ಮಲ್ಲಿಕಾರ್ಜುನ ಹೊಸಪಾಳ್ಯ ವಿಷಯ ಮಂಡಿಸುವರು. ವಿಜ್ಞಾನ ಲೇಖಕ ನಾಗೇಶ ಹೆಗಡೆ ಸಮಾರೋಪ ನುಡಿಗಳನ್ನಾಡುವರು ಎಂದು ತಿಳಿಸಿದ್ದಾರೆ.

ಮಾಹಿತಿಗೆ 9449242284, 9845118866 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT