ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3,100 ಐಸೊಲೇಷನ್ ಬೋಗಿಗಳನ್ನು ಸಾಮಾನ್ಯ ಬೋಗಿಗಳಾಗಿ ಪರಿವರ್ತಿಸಲಿದೆ ರೈಲ್ವೆ ಇಲಾಖೆ

ರಾಜ್ಯ ಸರ್ಕಾರಗಳಿಂದ ಐಸೊಲೇಷನ್ ಬೋಗಿಗಳ ಸಮರ್ಪಕವಾಗಿ ಬಳಕೆ ಇಲ್ಲ
Last Updated 23 ಮೇ 2020, 3:21 IST
ಅಕ್ಷರ ಗಾತ್ರ

ನವದೆಹಲಿ: ಹವಾನಿಯಂತ್ರಣ ರಹಿತ (ನಾನ್ ಎ.ಸಿ) ಬೋಗಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಾಗಾಗಿ, ಕೋವಿಡ್‌–19 ಪ್ರತ್ಯೇಕವಾಸಕ್ಕೆ ಉಪಯೋಗಿಸುವುದಕ್ಕೆಂದು ಪರಿವರ್ತಿಸಲಾಗಿದ್ದ ಕೆಲವು ಬೋಗಿಗಳನ್ನು ಮಾರ್ಪಡಿಸಿ, ಶ್ರಮಿಕ ವಿಶೇಷ ರೈಲುಗಳಿಗೆ ಬಳಸಿಕೊಳ್ಳಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಐಸೊಲೇಷನ್‌ಗಾಗಿ ಬಳಸಲು ಉದ್ದೇಶಿಸಿದ್ದ ಶೇ 60ರಷ್ಟು ಬೋಗಿಗಳನ್ನು ಪ್ರಯಾಣಿಕ ರೈಲಿನ ಸಾಮಾನ್ಯ ಬೋಗಿಗಳಾಗಿ ಪುನರ್ ರೂಪಿಸುವಂತೆ ಎಲ್ಲ ವಲಯ ಕಚೇರಿಗಳಿಗೆ ರೈಲ್ವೆ ಮಂಡಳಿಯು ಗುರುವಾರ ಪತ್ರ ಬರೆದಿದೆ.

ಐಸೊಲೇಷನ್ ಬೋಗಿಗಳನ್ನು ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಬಳಸಿಕೊಳ್ಳದ ಕಾರಣ, 3,100 ಬೋಗಿಗಳನ್ನು ಪುನಃ ಸಾಮಾನ್ಯ ಬೋಗಿಗಳಾಗಿ ಪರಿವರ್ತಿಸಲು ಇಲಾಖೆ ಮುಂದಾಗಿದೆ. ಇನ್ನುಳಿದ 2,131 ಬೋಗಿಗಳು ಐಸೊಲೇಷನ್‌ ವಾರ್ಡ್‌ಗಳಾಗಿ ಬಳಸಿಕೊಳ್ಳಲು ಲಭ್ಯವಿವೆ. ರಾಜ್ಯ ಸರ್ಕಾರಗಳು ಬೇಡಿಕೆ ಸಲ್ಲಿಸಿದರೆ ಅವುಗಳನ್ನು ಒದಗಿಸಲಾಗುತ್ತದೆ.

ವಲಸೆ ಕಾರ್ಮಿಕರಿಗಾಗಿ ದಿನಕ್ಕೆ 300ಕ್ಕೂ ರೈಲುಗಳನ್ನು ಇಲಾಖೆ ಓಡಿಸುತ್ತಿದೆ. 2,317 ಶ್ರಮಿಕ ವಿಶೇಷ ರೈಲುಗಳನ್ನು ಇಲಾಖೆ ಓಡಿಸಿದ್ದು, 30 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ತಲುಪಿಸಿದೆ.

ಕೋವಿಡ್ ಹೋರಾಟದಲ್ಲಿ ಭಾಗಿ

ಲಾಕ್‌ಡೌನ್ ಘೋಷಿಸಿ ಪ್ರಯಾಣಿಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ, ರೈಲ್ವೆ ಇಲಾಖೆಯು ಬೋಗಿಗಳನ್ನು ಕೋವಿಡ್‌ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿತು. ಇಲಾಖೆಯ ಕಾರ್ಖಾನೆಗಳಲ್ಲಿ ಪಿಪಿಇ ಕಿಟ್, ಸ್ಯಾನಿಟೈಸರ್ ಹಾಗೂ ಇತರೆ ವೈದ್ಯಕೀಯ ಪರಿಕರಗಳು ತಯಾರಾದವು. ಇಲಾಖೆಯು ತನ್ನ ಆಸ್ಪತ್ರೆಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಸನ್ನದ್ಧವಾಗಿರಿಸಿದೆ. ಚಿಕಿತ್ಸೆಗೆ ನೆರವಾಲು ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT