ಸೋಮವಾರ, ಜನವರಿ 20, 2020
29 °C

ಪ್ರತಿಭಟನೆ ನಡೆಸಿದ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಪೊಲೀಸ್ ಲಾಠಿ ಪ್ರಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Delhi police detain Jawaharlal Nehru University (JNU) students who were protesting outside the Shastri Bhawan against January 5 violence on the university campus

ನವದೆಹಲಿ: ದೆಹಲಿಯ ಮಂಡಿ ಹೌಸ್‌ನಿಂದ ರಾಷ್ಟ್ರಪತಿ ಭವನಕ್ಕೆ ಜೆಎನ್‌ಯು ವಿದ್ಯಾರ್ಥಿಗಳು ಕೈಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆ ವೇಳೆ ದೆಹಲಿ ಪೊಲೀಸರು ಲಾಠಿ ಪ್ರಹಾರ ಮಾಡಿದ್ದು, ಪ್ರತಿಭಟನಕಾರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಘೋಷಣೆ ಕೂಗುತ್ತಾ ರಾಷ್ಟ್ರಪತಿ ಭವನದತ್ತ ಹೊರಟ ವಿದ್ಯಾರ್ಥಿಗಳನ್ನು ಪೊಲೀಸರು ಎಳೆದು ಬಸ್‌ಗೆ ತುಂಬಿದ್ದಾರೆ. ಲಾಠಿ ಪ್ರಹಾರದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಗಾಯವಾಗಿದ್ದು, ಪ್ರತಿಭಟನಕಾರರನ್ನು ಮೂರು ಬಸ್‌ಗಳಲ್ಲಿ ತುಂಬಿ ಪೊಲೀಸರು ಕರೆದೊಯ್ದಿದ್ದಾರೆ.

ಹಿರಿಯ ರಾಜಕಾರಣಿಗಳಾದ ಸೀತಾರಾಂ ಯೆಚೂರಿ, ಡಿ. ರಾಜಾ,  ಪ್ರಕಾಶ್ ಕಾರಾಟ್, ಬೃಂದಾ ಕಾರಾಟ್ ಮತ್ತು ಶರದ್ ಯಾದವ್ ಮೊದಲಾದವರು ವಿದ್ಯಾರ್ಥಿಗಳ ಪ್ರತಿಭಟನೆಗೆ ಸಾಥ್ ನೀಡಿದ್ದರು.

ಇದನ್ನೂ ಓದಿ:  ಜೆಎನ್‌ಯುಗೆ ಭೇಟಿ ನೀಡಿದ್ದಕ್ಕೆ ದೀಪಿಕಾ ದೇಶದ್ರೋಹಿ ಆಗಿಬಿಟ್ಟರಾ:ಕನ್ಹಯ್ಯ ಕುಮಾರ್

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು