ಸೋಮವಾರ, ಜುಲೈ 26, 2021
27 °C

ಹಾಸಿಗೆ ಮೇಲೆ ಮಲಗಿ ವಿಚಾರಣೆಗೆ ಹಾಜರಾದ ವಕೀಲ: ಸುಪ್ರೀಂ ಕೋರ್ಟ್ ಅಸಮಾಧಾನ

ಪಿಟಿಐ Updated:

ಅಕ್ಷರ ಗಾತ್ರ : | |

ವಿಡಿಯೊ ಕಾನ್ಫರೆನ್ಸ್‌–ಪ್ರಾತಿನಿಧಿಕ ಚಿತ್ರ

ನವದೆಹಲಿ: ಹಾಸಿಗೆ ಮೇಲೆ ಮಲಗಿ ನ್ಯಾಯಾಲಯದ ಕಲಾಪಕ್ಕೆ ಹಾಜರಾದ ವಕೀಲರೊಬ್ಬರ ನಡೆಗೆ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. 

ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯುತ್ತಿದ್ದ ಕಲಾಪದ ಸಂದರ್ಭದಲ್ಲಿ ವಕೀಲರೊಬ್ಬರು ಟೀಶರ್ಟ್‌ ಧರಿಸಿದ್ದಲ್ಲದ್ದೇ  ಶಿಷ್ಟಾಚಾರ ಪಾಲಿಸದ ರೀತಿಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು.

ಕಲಾಪದ ಸಾರ್ವಜನಿಕ ಸ್ವರೂಪವನ್ನು ಗಮನದಲ್ಲಿಸಿಕೊಂಡು, ನ್ಯಾಯಾಲಯದ ಕನಿಷ್ಠ ಶಿಷ್ಟಾಚಾರವನ್ನು ಅನುಸರಿಸಬೇಕು. ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಯುವ ವಿಚಾರಣೆಯಲ್ಲಿ ಅಗತ್ಯವಲ್ಲದ ದೃಶ್ಯಗಳಿಗೆ ಕಡಿವಾಣ ಹಾಕಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಎಸ್‌.ರವೀಂದ್ರ ಭಟ್‌ ಅವರ ಬಳಿ ವಕೀಲರು ಕ್ಷಮಾಪಣೆ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು