ರಫೇಲ್ ಒಪ್ಪಂದ: ರಾಹುಲ್ ಮೇಲೆ ಮುಗಿಬಿದ್ದ ಬಿಜೆಪಿ

7
ಬಿಜೆಪಿ ನಾಯಕರಿಂದ ದೇಶದ ವಿವಿಧೆಡೆ ಪತ್ರಿಕಾಗೋಷ್ಠಿ

ರಫೇಲ್ ಒಪ್ಪಂದ: ರಾಹುಲ್ ಮೇಲೆ ಮುಗಿಬಿದ್ದ ಬಿಜೆಪಿ

Published:
Updated:

ನವದೆಹಲಿ: ರಫೇಲ್ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತಿರುಗಿಬಿದ್ದಿದೆ.

ರಫೇಲ್ ವಿಚಾರದಲ್ಲಿ ರಾಹುಲ್ ಸಂಸತ್ತಿನ ಮತ್ತು ದೇಶದ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಹಲವು ಸಚಿವರು ಇಂದು ದೇಶದ ಹಲವೆಡೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಮುಂಬೈನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕೋಲ್ಕತ್ತದಲ್ಲಿ ಸಚಿವೆ ಸಮೃತಿ ಇರಾನಿ, ಲಖನೌನಲ್ಲಿ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಪುಣೆಯಲ್ಲಿ ಬಿಜೆಪಿ ಸಂಸದ ಪೂನಂ ಮಹಾಜನ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

‘ನಾವು ವಿಮಾನಗಳ ಬೆಲೆ ಮಾಹಿತಿಯನ್ನು ಸಿಎಜಿಗೆ ನೀಡಿದ್ದೇವೆ. ಅದನ್ನು ಪರಿಶೀಲಿಸಿ ಸಿಎಜಿ ವರದಿ ಸಿದ್ಧಪಡಿಸಲಿದೆ. ಅದನ್ನು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ನೀಡಲಾಗುತ್ತದೆ. ಈ ಪ್ರಕ್ರಿಯೆ ಆರಂಭವಾಗಿದೆ. ಇದನ್ನೇ ನಾವು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದೆವು. ಆದರೆ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ. ಅದನ್ನು ಸರಿಪಡಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೇವೆ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 1

  Sad
 • 1

  Frustrated
 • 5

  Angry

Comments:

0 comments

Write the first review for this !