ಭಾನುವಾರ, ನವೆಂಬರ್ 17, 2019
23 °C

ಖ್ಯಾತ ಸಾಹಿತಿ ನವನೀತಾ ದೇವ್‌ ಸೇನ್‌ ನಿಧನ

Published:
Updated:
Prajavani

ಕೋಲ್ಕತ್ತ: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಸಾಹಿತಿ ನವನೀತಾ ದೇವ್‌ ಸೇನ್‌ (81) ಶುಕ್ರವಾರ ನಿಧನರಾಗಿದ್ದಾರೆ.

ನವನೀತಾ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತ, ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮೊದಲ ಪತ್ನಿ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರನ್ನು 10 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮುಂಜಾನೆ 7.35ಕ್ಕೆ ಸಾವಿಗೀಡಾಗಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರಾಗಿದ್ದ ಸೇನ್ ಅವರಿಗೆ ಇಬ್ಬರು ಪುತ್ರಿಯರಾದ ಲೇಖಕಿ ಅಂತಾರಾ ಹಾಗೂ ನಟಿ ನಂದನಾ ಇದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿರುವ ದೇವ್ ಸೇನ್‌, ಸಣ್ಣ ಕಥೆ ಹಾಗೂ ಪ್ರವಾಸ ಬರವಣಿಗೆಯಲ್ಲಿ ಸಿದ್ಧ ಹಸ್ತರಾಗಿದ್ದರು. ಇದಲ್ಲದೇ ರಾಮಾಯಣ ಸಂಶೋಧನೆಯಲ್ಲಿ ದೊಡ್ಡ ಹೆಸರು ಮಾಡಿದ್ದರು. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ಅಮೆರಿಕದ ಕೊಲರೊಡು ವಿಶ್ವವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದ ಸೇನ್‌, ಜಾಧವಪುರ ವಿಶ್ವವಿದ್ಯಾಲಯದಲ್ಲಿ ತುಲನಾತ್ಮಕ ಸಾಹಿತ್ಯದ ಉಪನ್ಯಾಸಕಿಯಾಗಿಯೂ ಕೆಲಸ ಮಾಡಿದ್ದರು.

ದೇವ್ ಸೇನ್ ಅವರು ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರನ್ನು 1958ರಲ್ಲಿ ಮದುವೆಯಾಗಿದ್ದರು. 1976ರಲ್ಲಿ ವಿಚ್ಛೇದನ ಪಡೆದಿದ್ದರು.

ಪ್ರತಿಕ್ರಿಯಿಸಿ (+)