ವಾಸಯೋಗ್ಯ ನಗರ ಪುಣೆ ಮೊದಲು

7
Pune

ವಾಸಯೋಗ್ಯ ನಗರ ಪುಣೆ ಮೊದಲು

Published:
Updated:

ನವದೆಹಲಿ: ಮಹಾರಾಷ್ಟ್ರದ ಪುಣೆ ನಗರವು ವಾಸಕ್ಕೆ ಸೂಕ್ತವಾದ ದೇಶದ ಅತ್ಯುತ್ತಮ ನಗರಗಳಲ್ಲಿ ಒಂದಾಗಿದೆ.

ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು, ಸ್ಮಾರ್ಟ್‌ ನಗರಗಳನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ದೇಶದ 111 ಪ್ರಮುಖ ನಗರಗಳ ಜೀವನಮಟ್ಟ ಕುರಿತ ಸಮೀಕ್ಷೆಯಲ್ಲಿ ಪುಣೆ ಮೊದಲ ಸ್ಥಾನ ಪಡೆದಿದೆ.

ಮಹಾರಾಷ್ಟ್ರದ ನವಿ ಮುಂಬೈ, ಗ್ರೇಟರ್‌ ಮುಂಬೈ ಹಾಗೂ ತಿರುಪತಿ ನಗರ ನಂತರದ ಸ್ಥಾನ ಪಡೆದಿವೆ. ಆದರೆ, ಮಾನದಂಡ ಅಳೆಯುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲಾದ ರಾಜ್ಯದ ಆರು ನಗರಗಳು 25ರೊಳಗಿನ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದು, ಬೆಂಗಳೂರು 58ನೇ ಸ್ಥಾನ ಗಳಿಸಿದೆ.

ಮಂಗಳೂರು 41ನೇ ಸ್ಥಾನ ಗಳಿಸಿದ್ದು, ಬೆಳಗಾವಿ (52), ಹುಬ್ಬಳ್ಳಿ– ಧಾರವಾಡ (57), ಶಿವಮೊಗ್ಗ (67), ತುಮಕೂರು (70) ಹಾಗೂ ದಾವಣಗೆರೆ (83) ನಂತರದ ಸ್ಥಾನದಲ್ಲಿವೆ.

ದೆಹಲಿ 65ನೇ ಸ್ಥಾನ ಗಳಿಸಿದ್ದರೆ, ಚೆನ್ನೈ 14ನೇ ಸ್ಥಾನದಲ್ಲಿದೆ. ಉತ್ತರಪ್ರದೇಶದ ರಾಂಪುರ ಕೊನೆಯ ಸ್ಥಾನ ಪಡೆದಿದೆ. ಕೋಲ್ಕತ್ತ ನಗರ ಸ್ಥಳೀಯ ಸಂಸ್ಥೆ ಸಮೀಕ್ಷೆಯಲ್ಲಿ ಭಾಗವಹಿಸಿರಲಿಲ್ಲ.

ಆಡಳಿತ ವ್ಯವಸ್ಥೆ, ಶಿಕ್ಷಣ, ಆರೋಗ್ಯ, ಆರ್ಥಿಕತೆ, ಉದ್ಯೋಗ, ಘನ ತ್ಯಾಜ್ಯ ನಿರ್ವಹಣೆ, ವಿದ್ಯುತ್‌, ನೀರು ಪೂರೈಕೆಯಂತಹ ಪ್ರಮುಖ ಸಾಮಾಜಿಕ ಮಾನದಂಡಗಳನ್ನು ಆಧಾರವಾಗಿಸಿಕೊಂಡು ಸಚಿವಾಲಯವು ಮೊದಲ ಬಾರಿಗೆ ಸಮೀಕ್ಷೆ ನಡೆಸಿದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರದೀಪ್‌ಸಿಂಗ್‌ ಪುರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !