ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾ: ಈಗ ಬಿಜೆಪಿ ಸರದಿ

Last Updated 19 ಡಿಸೆಂಬರ್ 2018, 19:34 IST
ಅಕ್ಷರ ಗಾತ್ರ

ನವದೆಹಲಿ:ಮಧ್ಯಪ್ರದೇಶ, ಛತ್ತೀಸಗಡದ ಬೆನ್ನಲ್ಲೇ ರಾಜಸ್ಥಾನ ಮತ್ತು ಬಿಜೆಪಿ ಅಧಿಕಾರದಲ್ಲಿರುವ ಅಸ್ಸಾಂ, ಗುಜರಾತ್‌ ಕೂಡ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿವೆ.

ರಾಜಸ್ಥಾನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡು ದಿನಗಳಲ್ಲೇ ಅಶೋಕ್‌ ಗೆಹ್ಲೋಟ್‌ ಈ ನಿರ್ಧಾರ
ಕೈಗೊಂಡಿದ್ದಾರೆ.

ಸಹಕಾರ ಬ್ಯಾಂಕ್‌ಗಳಿಂದ ಪಡೆದ ಅಲ್ಪಾವಧಿ ಸಾಲ ಮತ್ತು ಇತರ ಬ್ಯಾಂಕ್‌ಗಳಿಂದ ಪಡೆದ ₹2 ಲಕ್ಷದವರೆಗಿನ ಸಾಲಗಳನ್ನು ಮನ್ನಾ ಮಾಡುವುದಾಗಿ ಅವರು ಬುಧವಾರ ಪ್ರಕಟಿಸಿದ್ದಾರೆ.

ಇದರಿಂದ ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ ₹8,000 ಕೋಟಿ ಹೊರೆ ಬೀಳಲಿದೆ.ಅಸ್ಸಾಂ ಸರ್ಕಾರ ₹600 ಕೋಟಿ ಸಾಲಮನ್ನಾ ಮಾಡಿದರೆ, ಗುಜರಾತ್‌ ಸರ್ಕಾರ ರೈತರು ಪಾವತಿಸಬೇಕಾಗಿದ್ದ ₹ 625 ಕೋಟಿ ವಿದ್ಯುತ್‌ ಶುಲ್ಕವನ್ನು ಮನ್ನಾ ಮಾಡುವುದಾಗಿ ಹೇಳಿದೆ.

ಅಸ್ಸಾಂನ ಎಂಟು ಲಕ್ಷ ಮತ್ತು ಗುಜರಾತ್‌ನಲ್ಲಿ ಆರು ಲಕ್ಷ ರೈತರು ಇದರ ಲಾಭ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್‌, ಕರ್ನಾಟಕ, ಮಧ್ಯ ಪ್ರದೇಶ ಮತ್ತು ಛತ್ತೀಸಗಡ ಸರ್ಕಾರಗಳುಈಗಾಗಲೇ ಸಾಲಮನ್ನಾ ಘೋಷಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT