ಸೋಮವಾರ, ಜುಲೈ 13, 2020
29 °C

11ರಿಂದ ತಿರುಪತಿ ದೇಗುಲ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುಪತಿ/ತಿರುವನಂತಪುರ: ಖ್ಯಾತ ದೇವಸ್ಥಾನಗಳಾದ ಕೇರಳದಲ್ಲಿರುವ ಶಬರಿಮಲೆ ಹಾಗೂ ಆಂಧ್ರಪ್ರದೇಶದಲ್ಲಿರುವ ತಿರುಪತಿ ದೇವಸ್ಥಾನ ಲಾಕ್‌ಡೌನ್‌ ಬಳಿಕ ಮತ್ತೆ ತೆರೆಯಲು ಸಜ್ಜಾಗಿದೆ. 

ಜೂನ್‌ 11ರಿಂದ ತಿರುಪತಿಯಲ್ಲಿ ದೇವರ ದರ್ಶನ ಆರಂಭವಾಗಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ(ಟಿಟಿಡಿ) ತಿಳಿಸಿದೆ.

‘10ವರ್ಷಕ್ಕಿಂತ ಕೆಳಗಿನ ಮಕ್ಕಳು ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಪ್ರವೇಶವಿಲ್ಲ. ದಿನಕ್ಕೆ ಕೇವಲ 6 ಸಾವಿರ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗುವುದು’ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜೂನ್‌ 9ರಿಂದ ಶಬರಿಮಲೆಗೆ ಭಕ್ತರು ಭೇಟಿ ನೀಡಬಹುದು’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು