‘ಮೋದಿ ಆಧುನಿಕ ಔರಂಗಜೇಬ’

ಸೋಮವಾರ, ಮೇ 27, 2019
24 °C

‘ಮೋದಿ ಆಧುನಿಕ ಔರಂಗಜೇಬ’

Published:
Updated:

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಔರಂಗಜೇಬನ ಆಧುನಿಕ ಅವತಾರ’ ಎಂದು ಕಾಂಗ್ರೆಸ್‌ ಮುಖಂಡ ಸಂಜಯ ನಿರುಪಮ್‌ ಆರೋಪಿಸಿದ್ದಾರೆ. 

‘ಆಧುನಿಕ ಕಾಲದ ಔರಂಗಜೇಬನನ್ನು ಈ ಕ್ಷೇತ್ರದ ಮತದಾರರು ಆಯ್ಕೆ ಮಾಡಿದ್ದರು. ಆದರೆ, ಅವರು ವಿವಿಧ ಕಾರಿಡಾರ್‌ಗಳ ಹೆಸರಿನಲ್ಲಿ ನೂರಾರು ದೇವಾಲಯಗಳನ್ನು ಇಲ್ಲಿ ಧ್ವಂಸ ಮಾಡಿದ್ದಾರೆ. ಹಾಗಾಗಿ ಅವರು ಆಧುನಿಕ ಔರಂಗಜೇಬ’ ಎಂದು ನಿರುಪಮ್‌ ಹೇಳಿದ್ದಾರೆ. 

ಬಿಜೆಪಿ ಇದಕ್ಕೆ ತಿರುಗೇಟು ನೀಡಿದೆ. ಆಕ್ರಮಣಕಾರರು ಭಾರತಕ್ಕೆ ಏನು ಮಾಡಿದ್ದರು ಎಂಬುದನ್ನು ನೆನಪಿಸುವುದೇ ತನಗೆ ಉಪಯುಕ್ತ ಎಂದು ಕಾಂಗ್ರೆಸ್‌ ಭಾವಿಸಿದೆ. ಇಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ರಾಜಕೀಯಕ್ಕೆ ಬಳಸುತ್ತಿದೆ ಎಂದು ಆಕ್ಷೇಪಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !