‘ಸೇನೆ ಮೋದಿಯದ್ದು ಎಂದಾತ ದೇಶದ್ರೋಹಿ’

ಮಂಗಳವಾರ, ಏಪ್ರಿಲ್ 23, 2019
31 °C
ಕೇಂದ್ರ ಸಚಿವ ವಿ.ಕೆ.ಸಿಂಗ್ ಕಟುನುಡಿ

‘ಸೇನೆ ಮೋದಿಯದ್ದು ಎಂದಾತ ದೇಶದ್ರೋಹಿ’

Published:
Updated:
Prajavani

ನವದೆಹಲಿ: ಭಾರತದ ಸೇನೆಯು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ, ಅದು ಮೋದಿಗೆ ಸೇರಿದ್ದು ಎಂದು ಯಾರಾದರೂ ಹೇಳಿದರೆ ಆ ವ್ಯಕ್ತಿ ದೇಶದ್ರೋಹಿ ಎಂದು ವಿದೇಶಾಂಗ ಖಾತೆಯ ರಾಜ್ಯ ಸಚಿವ, ನಿವೃತ್ತ ಜನರಲ್‌ ವಿ.ಕೆ.ಸಿಂಗ್‌ ಹೇಳಿದ್ದಾರೆ.

ಗಾಜಿಯಾಬಾದ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಾರತೀಯ ಸೇನೆಯನ್ನು ‘ಮೋದಿಯ ಸೇನೆ’ ಎಂದು ಕರೆದಿದ್ದರು. ಈ ಬಗ್ಗೆ ‘ಬಿಬಿಸಿ ಹಿಂದಿ’ ನಡೆಸಿದ ಸಂದರ್ಶನದಲ್ಲಿ ವಿ.ಕೆ.ಸಿಂಗ್ ಈ ಮಾತು ಹೇಳಿದ್ದಾರೆ.

‘ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಕರೆದರೆ, ದೇಶದ್ರೋಹ. ಭಾರತೀಯ ಸೇನೆ ಭಾರತದ್ದು, ಅದು ಯಾವುದೇ ಪಕ್ಷದ ಸೇನೆ ಅಲ್ಲ’ ಎಂದು ವಿ.ಕೆ.ಸಿಂಗ್ ಹೇಳಿದ್ದಾರೆ.

‘ಬಿಜೆಪಿಯ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವ ಎಲ್ಲರೂ ತಮ್ಮನ್ನು ತಾವು ಸೈನಿಕರು ಎಂದು ಕರೆದುಕೊಳ್ಳುತ್ತಾರೆ, ಮತ್ತು ಅವರೆಲ್ಲರನ್ನೂ ಬಿಜೆಪಿಯ ಸೇನೆ ಎಂದು ಕರೆಯಲಾಗುತ್ತದೆ. ಆ ರ‍್ಯಾಲಿಯಲ್ಲಿ ಬಿಜೆಪಿ ಸೇನೆಯ ಬಗ್ಗೆ ಮಾತನಾಡಿದ್ದಾರೋ? ಅಥವಾ ಭಾರತೀಯ ಸೇನೆಯ ಬಗ್ಗೆ ಮಾತನಾಡಿದ್ದಾರೋ ಎಂಬುದು ನನಗೆ ಗೊತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ಆದರೆ ತಮ್ಮ ಮಾತಿನಲ್ಲಿ ಎಲ್ಲಿಯೂ ಅವರು ಯೋಗಿ ಆದಿತ್ಯನಾಥ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ.

**
ಸೇನೆ ಎಂದರೆ, ಭಾರತೀಯ ಸೇನೆ. ಪಕ್ಷದ ಕಾರ್ಯಕರ್ತರನ್ನು ಎಷ್ಟೋ ಬಾರಿ ನಾವು ಮೋದಿ ಸೇನೆ ಎಂದು ಕರೆಯುತ್ತೇವೆ. ಎರಡರ ಮಧ್ಯೆ ಬಹಳ ವ್ಯತ್ಯಾಸವಿದೆ.
-ವಿ.ಕೆ.ಸಿಂಗ್, ಕೇಂದ್ರ ಸಚಿವ

ಬರಹ ಇಷ್ಟವಾಯಿತೆ?

 • 29

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !