ಲೋಕಸಭೆ ಜೊತೆಗೇ ಕಾಶ್ಮೀರ ಚುನಾವಣೆ

ಮಂಗಳವಾರ, ಮಾರ್ಚ್ 26, 2019
33 °C

ಲೋಕಸಭೆ ಜೊತೆಗೇ ಕಾಶ್ಮೀರ ಚುನಾವಣೆ

Published:
Updated:

ಶ್ರೀನಗರ: ಲೋಕಸಭೆ ಜೊತೆಗೇ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೂ ಚುನಾವಣೆ ನಡೆಸುವ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಸುನೀಲ್‌ ಅರೋರ ಸುಳಿವು ನೀಡಿದ್ದಾರೆ.

‘ರಾಜ್ಯದ ಆಡಳಿತವಲ್ಲದೇ ಪ್ರತಿಯೊಂದು ರಾಜಕೀಯ ಪಕ್ಷ ಸಹ ಒಟ್ಟಿಗೆ ಚುನಾವಣೆ ನಡೆಸಲು ಸಹಮತ ವ್ಯಕ್ತಪಡಿಸಿವೆ’ ಎಂದು ಅವರು ಜಮ್ಮುವಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಅರಿವು ಚುನಾವಣಾ ಆಯೋಗಕ್ಕಿದೆ. ಚುನಾವಣೆಯನ್ನು ಯಾವ ದಿನಾಂಕ ಹಾಗೂ ಎಷ್ಟನೇ ಹಂತದಲ್ಲಿ ನಡೆಸಬೇಕು ಎಂಬ ವಿಚಾರ ಬಂದಾಗ ಇಲ್ಲಿ ಕೈಗೊಳ್ಳಬೇಕಾದ ಭದ್ರತಾ ವ್ಯವಸ್ಥೆ ಬಗ್ಗೆ ಸಹ ಆಯೋಗ ಗಮನ ಹರಿಸಲಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !