ಶನಿವಾರ, ಜನವರಿ 18, 2020
19 °C

2022ಕ್ಕೆ ಹೊಸ ಕಟ್ಟಡದಲ್ಲಿ ಸಂಸತ್‌ ಅಧಿವೇಶನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಭಾರತ 75ನೇ ಸ್ವಾತಂತ್ರ್ಯ ಸಂಭ್ರಮ ಆಚರಿಸುವ ವೇಳೆಗೆ (2022) ಸಂಸತ್‌ ಅಧಿವೇಶನ ಹೊಸ ಕಟ್ಟಡದಲ್ಲಿ ನಡೆಯಲಿದೆ’ ಎಂದು ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ ತಿಳಿಸಿದರು. 

ಚಳಿಗಾಲದ ಅಧಿವೇಶದ ಮುಕ್ತಾಯದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರ್ಲಾ, ‘2022ರ ವೇಳೆಗೆ ಹೊಸ ಕಟ್ಟಡ ನಿರ್ಮಾಣವಾಗುವ ಭರವಸೆ ಇದೆ. ಕಟ್ಟಡ ನಿರ್ಮಾಣಕ್ಕೆ ಎರಡು–ಮೂರು ಜಾಗಗಳನ್ನು ಸರ್ಕಾರ ಗುರುತಿಸಿದೆ. ಹೊಸ ಕಟ್ಟಡದಲ್ಲಿ ಹಲವು ತಾಂತ್ರಿಕ ವ್ಯವಸ್ಥೆಗಳಿರಲಿದ್ದು, ಸಂಸದರು ಕುಳಿತುಕೊಳ್ಳುವ ಜಾಗದಲ್ಲಿ ಆನ್‌ಲೈನ್‌ ಮಾಹಿತಿ ವ್ಯವಸ್ಥೆ ಇರಲಿದೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು