ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀರ್ಘಾವಧಿ ಮುಂಗಾರು ಋತು

Last Updated 9 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ವರ್ಷದ ನೈರುತ್ಯ ಮುಂಗಾರು ಋತುವನ್ನು ದೀರ್ಘಾವಧಿ ಮುಂಗಾರು ಎನ್ನಲಾಗುತ್ತಿದೆ.ಕಾರಣ ಅದು ಒಂದು ತಿಂಗಳು ತಡವಾಗಿ ಮುಗಿಯುತ್ತಿದೆ. ವಾಡಿಕೆಯಂತೆ ಮೂರು ತಿಂಗಳು ಬರುವ ಮುಂಗಾರು ಮಳೆ, ಈ ವರ್ಷನಾಲ್ಕು ತಿಂಗಳಿಗೂ ಹೆಚ್ಚು ಕಾಲ ಬಂದಿರುವುದು ದಾಖಲೆ ಎಂದು ಭಾರತೀಯ ಹವಾಮಾನ (ಐಎಂಡಿ) ಇಲಾಖೆ ತಿಳಿಸಿದೆ.

ಪಂಜಾಬ್, ಹರಿಯಾಣ ಮತ್ತು ಉತ್ತರ ರಾಜಸ್ಥಾನದ ಕೆಲ ಭಾಗಗಳಲ್ಲಿ ನೈರುತ್ಯ ಮುಂಗಾರು ಋತು ಬುಧವಾರ ಕೊನೆಯಾಗಿದೆ. ವಾಡಿಕೆಯಂತೆ ಸೆಪ್ಟೆಂಬರ್‌ 1ಕ್ಕೆ ಈ ಭಾಗದಲ್ಲಿ ಮುಂಗಾರು ಅವಧಿ ಮುಗಿಯಬೇಕಿತ್ತು ಎಂದು ಐಎಂಡಿ ಪ್ರಕಟಣೆ ತಿಳಿಸಿದೆ.

ದೇಶವು 1961ರಲ್ಲಿ ದೀರ್ಘಾವಧಿ ಮುಂಗಾರು ಋತುವನ್ನು ಕಂಡಿತ್ತು. ಆಗ ಅಕ್ಟೋಬರ್‌ 1ರವರೆಗೂ ಮುಂಗಾರು ಮಳೆ ಸುರಿದಿತ್ತು. ಬಳಿಕ 2007ರಲ್ಲಿ ಸೆಪ್ಟೆಂಬರ್‌ 30ರವರೆಗೂ ಈ ಮುಂಗಾರು ಋತು ಇತ್ತು ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT