ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಂತನಿಗೆ ಯಾವ ಜಾತಿಯೂ ಇಲ್ಲ; ಅವನು ಕುಸ್ತಿಪಟು: ಚೇತನ್‌ ಚೌಹಾನ್‌

Last Updated 23 ಡಿಸೆಂಬರ್ 2018, 10:25 IST
ಅಕ್ಷರ ಗಾತ್ರ

ಲಖನೌ: ಹನುಮಂತ ಯಾವ ವರ್ಗಕ್ಕೆ ಸೇರುತ್ತಾನೆ ಎಂಬ ಚರ್ಚೆಗೆ ಹೊಸ ತಿರುವು ದೊರೆತಿದ್ದು, ಅವನೊಬ್ಬ ಕ್ರೀಡಾಪಟು ಎಂಬ ಹೊಸ ವರೆಸೆ ಈಗ ಶುರುವಾಗಿದೆ.

ಆಂಜನೇಯನನ್ನು ಬೇರೆ ಬೇರೆ ಜಾತಿಗೆ ಸೇರಿಸುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದಉತ್ತರಪ್ರದೇಶದ ಕ್ರೀಡಾ ಸಚಿವ ಚೇತನ್‌ ಚೌಹಾನ್‌, ‘ದೇವರಿಗೆ ಯಾವುದೇ ಜಾತಿ ಇರುವುದಿಲ್ಲ. ಆಂಜನೇಯ ಕುಸ್ತಿ ಆಡುತ್ತಿದ್ದ. ಅಲ್ಲದೆ, ಕಸ್ತಿಪಟುಗಳು ಅವನನ್ನು ಆಧಾರಿಸುತ್ತಾರೆ. ಹೀಗಾಗಿ ನಾನೂ ಅದನ್ನೇ ಒಪ್ಪುತ್ತೇನೆ’ ಎಂದಿದ್ದಾರೆ.

ಶುಕ್ರವಾರವಾಷ್ಟೇಉತ್ತರ ಪ್ರದೇಶದ ಮುಜರಾಯಿ ಇಲಾಖೆ ಸಚಿವ ಚೌಧರಿ ಲಕ್ಷ್ಮಿನಾರಾಯಣ ಸಿಂಗ್‌ ಬಿಜೆಪಿ ಶಾಸಕ ಬುಕ್ಕಲ್‌ ನವಾಬ್‌, ’ಹನುಮಂತ ಜಾಟ್‌ ಸಮುದಾಯಕ್ಕೆ ಸೇರಿದವನು‘ ಎಂದು ಹೇಳಿಕೆ ನೀಡಿದ್ದರು.

ಇದಾದ ನಂತರ ಸಮಾಜವಾದಿ ಪಕ್ಷದ ಮುಖಂಡ ಪವನಸುತಗೊಂಡ್ ಸಮುದಾಯಕ್ಕೆ ಸೇರಿಸಿದವನು ಎಂದು ಹೇಳಿದ್ದರು. ಬಿಜೆಪಿ ಚುನಾವಣ ರ್‍ಯಾಲಿಯಲ್ಲಿ ಹನುಮ ದಲಿತ ಸಮುದಾಯಕ್ಕೆ ಸೇರಿದವನು ಎಂದು ಹೇಳುವ ಮೂಲಕ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈ ಚರ್ಚೆಯನ್ನು ಹುಟ್ಟುಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT