ಕೇರಳದಲ್ಲಿ ಪ್ರೇಮಿಗಳ ರಕ್ಷಣೆಗಾಗಿ ರೂಪುಗೊಳ್ಳಲಿದೆ 'ಪ್ರಣಯ ಸೇನೆ'

4

ಕೇರಳದಲ್ಲಿ ಪ್ರೇಮಿಗಳ ರಕ್ಷಣೆಗಾಗಿ ರೂಪುಗೊಳ್ಳಲಿದೆ 'ಪ್ರಣಯ ಸೇನೆ'

Published:
Updated:

ಕೊಚ್ಚಿ : ಕೇರಳದಲ್ಲಿ ಪ್ರೇಮಿಗಳಿಗೆ ರಕ್ಷಣೆ ನೀಡುವ ಸಲುವಾಗಿ ಪ್ರಣಯ ಸೇನೆ ರೂಪುಗೊಂಡಿದೆ. ಪ್ರೀತಿಸಿದ್ದಕ್ಕಾಗಿ ಪ್ರಾಣ ಕಳೆದುಕೊಂಡ ಕೆವಿನ್ ಮತ್ತು ಅವನ ಅಗಲಿಕೆಯಿಂದ ಕಣ್ಣೀರಿಡುತ್ತಿರುವ ನೀನೂ ಎಂಬ ಯುವತಿಯ ಪರಿಸ್ಥಿತಿ ಯಾರಿಗೂ ಬರಬಾರದು ಎಂಬ ಉದ್ದೇಶದಿಂದ ಈ ಸೇನೆ ಜಾರಿಗೆ ಬರಲಿದೆ ಎಂದು ಮಾತೃಭೂಮಿ ಸುದ್ದಿ ಪತ್ರಿಕೆ ವರದಿ ಮಾಡಿದೆ. ದೆಹಲಿಯ ಲವ್ ಕಮಾಂಡೊಗಳು ಈ ಸೇನೆಯಲ್ಲಿ  ಕಾರ್ಯವೆಸಗಲಿದ್ದಾರೆ.

ರಾಜ್ಯದ ಪ್ರತಿಯೊಂದು ವಾರ್ಡ್ ನಲ್ಲಿಯೂ ಕನಿಷ್ಠ 10 ಮಂದಿಯನ್ನು ಒಗ್ಗೂಡಿಸಿ ಅವರಿಗೆ ತರಬೇತಿ ನೀಡಿ ಪ್ರಣಯ ಸೇನೆಗೆ ಸೇರಿಸಲಾಗುವುದು. ಒಂದು ವರ್ಷದಲ್ಲಿ ಒಂದು ಲಕ್ಷ ಜನರಿಗೆ ತರಬೇತಿ ನೀಡಿ, ಪ್ರಣಯ ಜೋಡಿಗಳ ಸಂರಕ್ಷಣೆಗೆ  ಇವರನ್ನು ನೇಮಕ ಮಾಡಲಾಗುವುದು. ದೇಶದಲ್ಲಿ  52,000 ಲವ್ ಮ್ಯಾರೇಜ್ ನಡೆಸಿಕೊಟ್ಟ ಸಂಘಟನೆಯಾಗಿದೆ ಇದು.

ಪ್ರಣಯ ಸೇನೆ ರೂಪೀಕರಿಸುವುದರ ಅಂಗವಾಗಿ ಲವ್ ಕಮಾಂಡೊ ಕೇರಳ ಘಟಕ -22 ಕೋಯಿಕ್ಕೋಡ್  ಪಾಲಿಟೆಕ್ನಿಕ್ ಹಾಲ್‍ನಲ್ಲಿ ಸಭೆ ಸೇರಲಿದೆ. ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆ ಇನ್ನು ಮುಂದೆ ನಡೆಯಬಾರದು ಎಂಬ ಉದ್ದೇಶದಿಂದ ಈ ಸಂಘಟನೆ ಆರಂಭಿಸುತ್ತಿದ್ದೇವೆ ಎಂದು ಲವ್ ಕಮಾಂಡೊಸ್ ಕೇರಳ ಚೀಫ್ ಕೋ ಆರ್ಡಿನೇಟರ್ ಅನಿಲ್ ಜೋಸ್ ಹೇಳಿದ್ದಾರೆ. 

ಪ್ರೀತಿಸುವ ಜೋಡಿಗಳಿಗೆ ಸಲಹೆ ಸೂಚನೆಗಳನ್ನು ನೀಡಲು ಈ ಸಂಘಟನೆಯಲ್ಲಿ ತಜ್ಞರು ಇದ್ದಾರೆ. ತುರ್ತು ಪರಿಸ್ಥಿತಿಯಲ್ಲಿ, ಅವರ ಖಾಸಗಿತನಕ್ಕೆ ಧಕ್ಕೆ ಬಾರದಂತೆ ಅವರ ಪ್ರಶ್ನೆಗಳಿಗೆ ಉತ್ತರ ನೀಡುವ ತಜ್ಞರು ಮಾನವ ಹಕ್ಕು ಆಯೋಗದ ಸದಸ್ಯರೊಂದಿಗೆ ಚರ್ಚೆಗೆ ಅವಕಾಶ ಕಲ್ಪಿಸಿಕೊಡುತ್ತಾರೆ. ಪ್ರೇಮ ಸಂಬಂಧ, ವೈವಾಹಿಕ ಜೀವನದಲ್ಲಿ ಸಮಸ್ಯೆ, ಬೆಂಬಲ ಬಯಸುವವರು, ಜೀವನ ಸಂಗಾತಿ ಬಯಸುವವರಿಗೆ ಈ ಸಂಘಟನೆ ಸಹಾಯ ಮಾಡುತ್ತದೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !