ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲವ್‌ ಕಮಾಂಡೋಸ್’ ಮುಖ್ಯಸ್ಥನ ಬಂಧನ

ಮಹಿಳೆಗೆ ಕಿರುಕುಳ ನೀಡಿದ ಆರೋಪ
Last Updated 30 ಜನವರಿ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಮಹಿಳೆಯೊಬ್ಬರನ್ನು ಅಕ್ರಮ ಬಂಧನದಲ್ಲಿ ಇರಿಸಿಕೊಂಡ ಹಾಗೂ ಕಿರುಕುಳ ನೀಡಿದ ಆರೋಪದ ಮೇಲೆ‘ಲವ್ ಕಮಾಂಡೋಸ್’ ಎನ್‌ಜಿಒ ಮುಖ್ಯಸ್ಥ ಸಂಜಯ್ ಸಚ್‌ದೇವ್‌ ಎನ್ನುವವರನ್ನು ಬಂಧಿಸಿರುವುದಾಗಿದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಪೋಷಕರಿಂದ ವಿರೋಧ ಎದುರಿಸುವ ಸಂಗಾತಿಗಳನ್ನು ಒಂದುಗೂಡಿಸಲು ನೆರವಾಗುತ್ತಿದ್ದ ಈ ಎನ್‌ಜಿಒ, ಅವರಿಗೆ ಆಶ್ರಯ ನೀಡುತ್ತಿತ್ತು. ಸಂಜಯ್ ವಿರುದ್ಧ ಮಹಿಳೆಯೊಬ್ಬರು ದೆಹಲಿ ಮಹಿಳಾ ಆಯೋಗಕ್ಕೆ (ಡಿಸಿಡಬ್ಲ್ಯು) ದೂರು ನೀಡಿದ್ದರು. ಡಿಸಿಡಬ್ಲ್ಯುಈ ಸಂಬಂಧ ಪೊಲೀಸರನ್ನು ಸಂಪರ್ಕಿಸಿತ್ತು. ನಂತರ, ಮಹಿಳೆ ಹಾಗೂ ಆಕೆಯ ಸಂಗಾತಿ ಸೇರಿ ಎನ್‌ಜಿಒ ಆಶ್ರಯದಲ್ಲಿದ್ದ ಇನ್ನೂ ಮೂರು ಜೋಡಿಗಳ ಹೇಳಿಕೆ ಪಡೆದು ಪೊಲೀಸರುಪ್ರಕರಣ ದಾಖಲಿಸಿದ್ದಾರೆ.

‘ಸಂಜಯ್ ಕಿರುಕುಳ ನೀಡುತ್ತಿದ್ದರು. ನಮ್ಮ ಹಿಂದೆ ಸಾಕುನಾಯಿಗಳನ್ನು ಬಿಡುತ್ತಿದ್ದರು. ₹15ರಿಂದ 20 ಸಾವಿರ ದುಡ್ಡು ನೀಡುವಂತೆ ಪೀಡಿಸುತ್ತಿದ್ದರು’ ಎಂದು ಮಹಿಳೆ ಮತ್ತು ಅವರ ಸಂಗಾತಿ ಹೇಳಿಕೆ ನೀಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT